
ಪುತ್ತೂರು : ಪದವಿ ಶಿಕ್ಷಣವು ಒಂದು ಮೆಟ್ಟಿಲು ಮಾತ್ರ. ಪದವಿ ನಂತರದ ಉನ್ನತ ವ್ಯಾಸಾಂಗ ಮತ್ತು ಸರಿಯಾದ ವೃತ್ತಿ ಆಯ್ಕೆಯು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಬ್ಯಾಂಕಿಂಗ್, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಅಥವಾ ಪದವಿಯ ನಂತರ ಸಿಎ, ಸಿಎಸ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಅದಕ್ಕಾಗಿ ಹೆಚ್ಚಿನ ಸಂಶೋಧನಾ ಮನೋಭಾವ ಬೆಳೆಸಿಕೊಳ್ಳುವುದು ಮತ್ತು ಅವಕಾಶಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಸರಿಯಾದ ಸಂಸ್ಥೆಯ ಆಯ್ಕೆ ಮತ್ತು ನಿರಂತರ ಪ್ರಯತ್ನದಿಂದ ಮಾತ್ರ ಉನ್ನತ ವ್ಯಾಸಾಂಗದಲ್ಲಿ ಯಶಸ್ಸು ಸಾಧ್ಯ ಎಂದು ಉಜಿರೆಯ ಎಸ್.ಡಿ.ಎಮ್ ಕಾಲೇಜು (ಸ್ವಾಯತ್ತ) ಇದರ ನಿವೃತ್ತ ಪ್ರಾಂಶುಪಾಲ ಹಾಗೂ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಮಂಗಳೂರು ಇದರ ಸಂಶೋಧನಾ ಮಾರ್ಗದರ್ಶಕ ಡಾ.ಪಿ.ಎನ್. ಉದಯಚಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ ನಡೆದ ಟ್ರೈನಿಂಗ್ ಆ್ಯಂಡ್ ಪ್ಲೇಸ್ಮೆಂಟ್ ಸೆಲ್, ವಾಣಿಜ್ಯ ವಿಭಾಗ ಮತ್ತು ವ್ಯವಹಾರ ಆಡಳಿತ ವಿಭಾಗ ಹಾಗೂ ಐಕ್ಯೂಎಸಿ ಇದರ ಸಹಯೋಗದಲ್ಲಿ ಆಯೋಜಿಸಿದ ‘ಅನ್ಲಾಕಿಂಗ್ ಆಪರ್ಚುನಿಟಿಸ್’ ಎಂಬ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಪೆÇ್ರ. ಶ್ರೀಕೃಷ್ಣ ಗಣರಾಜ್ ಭಟ್.ಎಸ್ ಮಾತನಾಡಿ, ಬಿ.ಕಾಂ ಮತ್ತು ಬಿಬಿಎ
ಎನ್ನುವುದು ಕೆಲವೇ ಉದ್ಯೋಗಗಳಿಗೆ ಸೀಮಿತವಾಗಿರದೆ ಅದರಾಚೆಗೂ ಹಲವಾರು ಸೇವೆಗಳಿಗೆ ಮತ್ತು ಉದ್ಯೋಗಳಿಗೆ ಅವಕಾಶಗಳಿವೆ. ಅವಕಾಶಗಳಿಗೆ ಕೊರತೆಯಿಲ್ಲ, ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಂಡರೆ ಮುಂದೆ ಯಶಸ್ಸನ್ನು ಕಾಣಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರವಿಕಲಾ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ
ಮುಖ್ಯಸ್ಥೆ ರೇಖಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ವಿವೇಕಾನಂದ ಕಾಲೇಜಿನ ತೃತೀಯ ಬಿಬಿಎ ವಿಭಾಗದ ವಿದ್ಯಾರ್ಥಿನಿ ಧನಲಕ್ಷ್ಮಿ ಸ್ವಾಗತಿಸಿ, ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಚೈತ್ರ ಪೂಜಾರಿ ವಂದಿಸಿ, ಬಿಬಿಎ ವಿಭಾಗದ ವಿಧ್ಯಾರ್ಥಿನಿ ದೀಪ್ತಿ ಪ್ರಭು ನಿರೂಪಿಸಿದರು.











