
ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮನೆಯಲ್ಲಿ 15 ಲಕ್ಷ ರೂ. ಮೌಲ್ಯದ ವಿದೇಶಿ ಹಣವನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ.
ವಿದೇಶದಲ್ಲಿ ಹಣ ಹೂಡಿಕೆ ಆರೋಪ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಇ.ಡಿ ದಾಳಿ ನಡೆಸಿತ್ತು. ದಾಳಿ ವೇಳೆ ವಿದೇಶಿ ಹಣ ಪತ್ತೆಯಾಗಿದೆ.
ದಾಖಲೆಗಳು ಇಲ್ಲದ 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಸಿಕ್ಕಿದೆ. ಇದರ ಫೋಟೊವನ್ನು ಇ.ಡಿ ರಿಲೀಸ್ ಮಾಡಿದೆ. 5 ದೇಶಗಳ ಕರೆನ್ಸಿ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.











