Recent Posts

Saturday, September 12, 2026
ಹೆಚ್ಚಿನ ಸುದ್ದಿ

ಬೈಲಹೊಂಗಲ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಣ್ಣೆ ದರ್ಬಾರ್; 40 ಸಾವಿರ ಮೌಲ್ಯದ ಅಕ್ರಮ ಮದ್ಯ ವಶ- ಕಹಳೆ ನ್ಯೂಸ್

ಬೆಳಗಾವಿ:ಪಟ್ಟಣದ ಅಬಕಾರಿ ಇಲಾಖೆ ಅಧಿಕಾರಿಗಳು ಬೈಲಹೊಂಗಲ ಸಮೀಪದ ಗದ್ದಿಕರವಿನ ಕೊಪ್ಪ‌ ಗ್ರಾಮಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಅಕ್ರಮ ಸಾರಾಯಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಆರೋಪಿ ಗದ್ದಿಕರವಿನಕೊಪ್ಪ ಗ್ರಾಮದ ನಾಗಪ್ಪ ಬಸವಂತಪ್ಪ ಚಿಕ್ಕಪ್ಪ ನವರನಿಂದ 40 ಸಾವಿರ ಮೌಲ್ಯದ 26 ಲೀ‌. ಮದ್ಯ ಮತ್ತು ಮೋಟಾರು ಸೈಕಲ್‌ ನನ್ನು ವಶಪಡಿಸಿಕೊಳ್ಳಲಾಗಿದೆ. ಈತ ಗ್ರಾಮ ಪಂಚಾಯತಿ ಚುನಾವಣೆ ಪ್ರಯುಕ್ತ ಎಂ.ಕೆ.ಹುಬ್ಬಳ್ಳಿಯಿಂದ ಗದ್ದಿಕರವಿನಕೊಪ್ಪ ಗ್ರಾಮಕ್ಕೆ ಸಾಗಾಟ ಮಾಡುತ್ತಿದ್ದನೆಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ಬೈಲಹೊಂಗಲ ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.