Recent Posts

Sunday, September 13, 2026
ಸುದ್ದಿ

ಪರೀಕ್ಷೆ ಕೇವಲ ಅಂಕ ಗಳಿಕೆಯ ಪ್ರಕ್ರಿಯಾಗಿರಬಾರದು: ಎಮ್ ರವಿ ಶೆಟ್ಟಿ- ಕಹಳೆ ನ್ಯೂಸ್

ಪುತ್ತೂರು: ಶಿಕ್ಷಣವು ವಿದ್ಯಾರ್ಥಿಗಳ ಬದುಕಿಗೆ ಅಗತ್ಯವಿರುವ ಆಶಾಕಿರಣವನ್ನು ಮೂಡಿಸಬಲ್ಲ ಅದ್ಭುತ ಶಕ್ತಿ ಸಾಮಥ್ರ್ಯವನ್ನು ಹೊಂದಿದೆ. ಮೌಲ್ಯಯುತ ಶಿಕ್ಷಣವು ಒಂದು ರಾಷ್ಟ್ರದ ಶ್ರೀಮಂತಿಕೆಯನ್ನು ನಿರ್ಧರಿಸಬಲ್ಲುದು ಎಂದು ಅಡ್ವಾನ್ಸ್‍ಡ್ ಟೆಕ್ನಿಕಲ್ ಸರ್ವಿಸಸ್ ಹಾಗೂ ಅಸೋಸಿಯೇಟೆಡ್ ಟೆಕ್ನಿಕಲ್ ಸರ್ವಿಸಸ್, ಕತಾರ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ ರವಿ ಶೆಟ್ಟಿ ಹೇಳಿದರು.

ಜಾಹೀರಾತು


ಸಂತ ಫಿಲೋಮಿನಾ ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದ ಅವರು, ಮಾನವನು ತನ್ನ ಜೀವಿತಾವಧಿಯಲ್ಲಿ ಮಾನವೀಯ ಗುಣಗಳನ್ನು ಸಂಪಾದನೆಗೆ ವಿಶೇಷ ಕಾಳಜಿ ವಹಿಸಬೇಕು. ಶಿಕ್ಷಣವು ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗಳಿಗೆ ಸಿದ್ಧಗೊಳಿಸಿ, ಅಂಕ ಪಟ್ಟಿ ಗಳಿಕೆಯ ಪ್ರಕ್ರಿಯಾಗಿರಬಾರದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದಲ್ಲಿ ಈ ಶೈಕ್ಷಣಿಕ ವರ್ಷ ವಯೋ ನಿವೃತ್ತಿ ಹೊಂದುತ್ತಿರುವ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಗಣಪತಿ ಎಸ್, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಮ್ಯಾಕ್ಸಿಂ ಕಾರ್ಲ್, ಸಸ್ಯಶಾಸ್ತ್ರ ವಿಭಾಗ ಮುಖಸ್ಥ ಡಾ. ಪ್ರಸನ್ನ ರೈ ಕೆ ಮತ್ತು ಕಛೇರಿ ಆಡಳಿತ ಸಿಬ್ಬಂದಿ ಜೋಕಿಮ್ ಮಿನೇಜಸ್, ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ನ ಕಂಟಿನ್‍ಜೆಂಟ್ ಅಧಿಕಾರಿಯಾಗಿ ನವದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಅಸೋಸಿಯೇಟ್ ಎನ್‍ಸಿಸಿ ಅಧಿಕಾರಿ ಲೆ| ಜೊನ್ಸನ್ ಡೇವಿಡ್ ಸಿಕ್ವೇರಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹಾ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ ವಹಿಸಿದ್ದು, ವೇದಿಕೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಣ್ಣ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ. ಜಗಜೀವನ್‍ದಾಸ್ ರೈ ಉಪಸ್ಥಿತರಿದ್ದರು.

ರಂಗ ಕಲಾ ಸಂಘದ ಸದಸ್ಯರು ಪ್ರಾರ್ಥಿಸಿದರು. ಮಾನವಿಕ ವಿಭಾಗದ ಡೀನ್ ಪ್ರೊ. ದಿನಕರ ರಾವ್ ಸ್ವಾಗತಿಸಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರೊ. ಗಣೇಶ ಭಟ್ ಕೆ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ ಮತ್ತು ಯಶಸ್ವಿ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ವೈವಿಧ್ಯ ಪ್ರಸ್ತುತಗೊಂಡಿತು.