ಎಸ್.ವಿ. ಎಸ್ ವಿದ್ಯಾವರ್ಧಕ ಸಂಘ, ತ್ರಿಶಾ ಸಮೂಹ ಸಂಸ್ಥೆಗಳು ಇದರ ಆಶ್ರಯದಲ್ಲಿ ಒಂದು ದಿನದ ಪ್ರಾಧ್ಯಾಪಕ ಪ್ರಶಿಕ್ಷಣ ಕಾರ್ಯಕ್ರಮ – ಕಹಳೆ ನ್ಯೂಸ್

ಸಂಪನ್ಮೂಲ ವ್ಯಕ್ತಿಗಳಿಂದ ಕಟಪಾಡಿ ಎಸ್ ವಿ ಎಸ್ ನಲ್ಲಿ ನಡೆಯಿತು ರಾಷ್ಟ್ರ ಪತಿ ಅಬ್ದುಲ್ ಜೆ ಕಲಾಂ ರಂತ ಸಾವಿರಾರು ಮಹಾನ್ ಸಾಧಕ ರ ಆದರ್ಶ ಅನುಭವ ಮತ್ತು ಅವರು ಜಗತ್ತಿಗೆ ನೀಡಿದ ಅಮೂಲ್ಯ ಕಾಣಿಕೆ ಮತ್ತು ಪಲಶ್ರುತಿ ಯ ಅದಾರ ಇಟ್ಟು ಕೊಂಡು ಚಿನ್ನ ದ ತುಂಡನ್ನು ಬೆಂಕಿ ಯಲ್ಲಿ ಹಾಕಿ ಕೆತ್ತಿ ದಂತೆ ಉತ್ತಮ ಬೀಜ ಮತ್ತು ಪಲವತ್ತಾದ ಭೂಮಿ ಯಿಂದ ಹೆಮ್ಮರವಾಗಿ ಸುವಂತೆ ಮಾನವೀಯತೆ ಮತ್ತು ಸಂಸ್ಕೃತಿ ಬುಡಮೇಲಾಗಿ ಬೀಳುತ್ತಿರುವ ಈ ಸಂದರ್ಭದಲ್ಲಿ, ಸಮಾಜ ಕ್ಕೆ ಅಗತ್ಯ ಇರು ವ ಮಾರ್ಗದರ್ಶನ ಮತ್ತು ಧೈರ್ಯ ತುಂಬಾ ವ ಪುನಃರುತ್ತಾನ ದ ಭರವಸೆಯ ಪ್ರಾಮಾಣಿಕ ರಾಗಿ ಇವತ್ತಿನ ಶಿಕ್ಷಕ ರು ಜವಾಬ್ದಾರಿ ಯಿಂದ ಕರ್ತವ್ಯ ಮಾಡುವ ಹೊಣೆ ಗಾರಿಕೆ ಹೊತ್ತಾಗ ಗೌರವ ಮತ್ತು ಸಾರ್ಥಕ ತೆ ಅವರ ಪಾಲಿಗೆ ಬಂದೆ ಬರುತ್ತದೆ ಮಕ್ಕಳ ಅಗತ್ಯ ಪ್ರಶ್ನೆ ಗಳ, ಸಮಸ್ಯೆ ಗಳ, ಅವರ ಆಶಕ್ತಿ ಇರುವ ಆಶೆ ಗಳ ಅವಕಾಶ ವದಗಿಸಿ ಕೊಡಬೇಕು , ಮಕ್ಕಳಿಗೆ ಸರಿಯಾದ ದಾರಿ ತೋರಿಸು ವ ಶಿಕ್ಷಕರು, ಕಣ್ಣಿಗೆ ಕಾಣುವ, ಮಾತನಾಡುವ ದೇವರು ಎನ್ನುವ ಸಮಾಜದ ನಂಬಿಕೆಯನ್ನು ಅರಿತು ಶಿಕ್ಷಕರು ಜವಾಬ್ದಾರಿ ಯಿಂದ ಕರ್ತವ್ಯ ನಿರ್ವಹಿಸಬೇಕು
ಶಿಕ್ಷಣ ಕ್ಷೇತ್ರದಲ್ಲಿ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಶಿಕ್ಷಕರ ಕೌಶಲ್ಯ, ಬೋಧನಾ ವಿಧಾನ ಹಾಗೂ ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡಯಿತು.
ಪ್ರತಿಯೊಬ್ಬ ವಿದ್ಯಾರ್ಥಿಯ ಅಗತ್ಯ, ಆಸಕ್ತಿ, ಪ್ರಶ್ನೆ ಮತ್ತು ಸಮಸ್ಯೆಗಳನ್ನು ಶಿಕ್ಷಕರು ಅರ್ಥಮಾಡಿಕೊಳ್ಳಬೇಕು.
ಶಿಕ್ಷಕರು ಮಕ್ಕಳ ಕತ್ತಲೆಗೆ ಬೆಳಕು ನೀಡುವ ಸೂರ್ಯನಂತೆ, ಅವರ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಂತೆ ಕಾರ್ಯನಿರ್ವಹಿಸಬೇಕು
ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ವಾತಾವರಣವನ್ನು ನಿರ್ಮಿಸುವ
ಡಿಜಿಟಲ್ ತಂತ್ರಜ್ಞಾನವು ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಹಾಗೂ ಆಕರ್ಷಕವಾಗಿಸುತ್ತದೆ.
ವೀಡಿಯೊ, ಪ್ರಸ್ತುತಿ, ಕ್ವಿಜ್, ಕೃತಕ ಬುದ್ಧಿಮತ್ತೆ (AI) ಮತ್ತು ಆನ್‌ಲೈನ್ ಸಾಧನಗಳ ಮೂಲಕ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಬಹುದು.
ತಂತ್ರಜ್ಞಾನವು ವೈಯಕ್ತಿಕ ಕಲಿಕೆ, ಸೃಜನಾತ್ಮಕ ಚಟುವಟಿಕೆ ಮತ್ತು ಮೌಲ್ಯಮಾಪನವನ್ನು ಸುಲಭಗೊಳಿಸುತ್ತದೆ.
ಶಿಕ್ಷಕರು ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಕಲಿತು ತರಗತಿಯಲ್ಲಿ ಅಳವಡಿಸಿಕೊಳ್ಳಬೇಕು.
ಪೋಷಕರು ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಮತ್ತು ಉದ್ಯೋಗಾವಕಾಶಗಳನ್ನೂ ನಿರೀಕ್ಷಿಸುತ್ತಾರೆ.
ಶಿಕ್ಷಕರು ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ನಿರಂತರ ಸಂವಹನ ನಡೆಸಬೇಕು
ರಾಷ್ಟ್ರೀಯ ಶಿಕ್ಷಣ ನೀತಿ (NEP) ಹಿನ್ನೆಲೆಯಲ್ಲಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ನವೀನ ಬೋಧನಾ ವಿಧಾನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ಈ ಪ್ರಶಿಕ್ಷಣ ಕಾರ್ಯಕ್ರಮವು ಶಿಕ್ಷಕರಲ್ಲಿ ಹೊಸ ಚಿಂತನೆ, ಉತ್ಸಾಹ ಮತ್ತು ಜವಾಬ್ದಾರಿಯ ಮನೋಭಾವವನ್ನು ಬೆಳೆಸುವಲ್ಲಿ ಅತ್ಯಂತ ಉಪಯುಕ್ತವಾಯಿತು. ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣ, ತಂತ್ರಜ್ಞಾನದ ಸಮರ್ಪಕ ಬಳಕೆ, ಪೋಷಕರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಭವಿಷ್ಯದ ಶಿಕ್ಷಣದ ಅವಕಾಶಗಳ ಕುರಿತು ಸಂಪನ್ಮೂಲ ವ್ಯಕ್ತಿ ಗಳು ಮನವ ರಿಕೆ ಮಾಡಿ ಕೊಟ್ಟರು.ಎಸ್ ವಿ ಎಸ್ ವಿದ್ಯಾವರ್ಧಕ ಸಂಘ, ತ್ರಿಶಾ ಸಮೂಹ ಸಂಸ್ಥೆಗಳು ಇದರ ಆಶ್ರಯದಲ್ಲಿ ಒಂದು ದಿನದ ಪ್ರಾಧ್ಯಾಪಕ ಪ್ರಶಿಕ್ಷಣ ಕಾರ್ಯಕ್ರಮ .
ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಉತ್ತೇಜನ ಹೇಗೆ? ಚಂದನ್ ರಾವ್ ತಂತ್ರಜ್ಞಾನ ತರಗತಿಯ ವಿನೂತನೆಯನ್ನ ಹೇಗೆ ಹೆಚ್ಚಿಸುತ್ತದೆ . ಡಾ. ಶ್ರೀಧರ್ ಆಚಾರ್ಯ ವಿದ್ಯಾರ್ಥಿ ಮತ್ತು ಹೆತ್ತವರ ಆಲೋಚನಾ ಕ್ರಮಗಳೇನು ವಿರೂಪಾಕ್ಷ ದೇವರಮನೆ ಶಿಕ್ಷಣ ಸಂಸ್ಥೆಯಲ್ಲಿ ನಮ್ಮ ಮುಂದಿನ ಅವಕಾಶಗಳೇನು ಸಿಎ ಗೋಪಾಲಕೃಷ್ಣ ಭಟ್ ಇವರು ಗಳು ಮಾಹಿತಿ ನೀಡಿದರು ತ್ರಿಶಾ ಸಮೂಹ ಸಂಸ್ಥೆಗಳು ಆಯೋಜಿಸಿದ ಕಾರ್ಯಕ್ರಮ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಭಾಗವಹಿಸಿ ದರು
ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಸಿ.ಎ ಗೋಪಾಲಕೃಷ್ಣ ಭಟ್, ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇಂದ್ರ ಪೈ ಮುಖ್ಯೋಪಾದ್ಯಾಯರು, ಶಿಕ್ಷಕರು, ಉಪಸ್ಥಿತರಿದ್ದರು











