Saturday, June 27, 2026
ಸುದ್ದಿ

ಕಲ್ಲಡ್ಕ ಜೆಮ್(JEM) ಪಬ್ಲಿಕ್ ಸ್ಕೂಲ್‌ನಲ್ಲಿ ಋತುಚಕ್ರ ಹಾಗೂ ಡೈಪರ್ ಕುರಿತು ಅರಿವು ಕಾರ್ಯಾಗಾರ – ಕಹಳೆ ನ್ಯೂಸ್

 

ಜಾಹೀರಾತು

ಕಲ್ಲಡ್ಕ : ಗೊಳ್ತಮಾಜಲ್ ಗ್ರಾಮ ಪಂಚಾಯತ್, ಹಸಿರು ದಳ ಮಂಗಳೂರು, ಆಶಿರ್ವಾದ ಸಂಜೀವಿನಿ ಒಕ್ಕೂಟ ವತಿಯಿಂದ ಜೆಮ್(JEM) ಪಬ್ಲಿಕ್ ಸ್ಕೂಲ್‌ನಲ್ಲಿ ಋತುಚಕ್ರ ಹಾಗೂ ಡೈಪರ್ ಕುರಿತು ಅರಿವು ಕಾರ್ಯಾಗಾರ ಜೂನ್ 25 ಗುರುವಾರ ಜರಗಿತು.
ಕಾರ್ಯಾಗಾರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ದುಷ್ಪರಿಣಾಮಗಳು, ಅವುಗಳಿಗೆ ಪರ್ಯಾಯವಾಗಿ ಬಳಸಬಹುದಾದ ಸುಸ್ಥಿರ ಆಯ್ಕೆಗಳು ಹಾಗೂ ಡೈಪರ್ ಬಳಕೆಯ ಕುರಿತು ಅರಿವು ಮೂಡಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿನಿಯರು ಮುಕ್ತವಾಗಿ ಚರ್ಚಿಸಿ ಋತುಚಕ್ರಕ್ಕೆ ಸಂಬಂಧಿಸಿದ ವಿವಿಧ ಆರೋಗ್ಯ ಸಮಸ್ಯೆಗಳು ಮತ್ತು ಅನುಮಾನಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡರು.

ಸಂಪನ್ಮೂಲ ವ್ಯಕ್ತಿಗಳಾಗಿ ಹಸಿರು ದಳ ಮೇಲ್ವಿಚಾರಕ ರಾದ ಶ್ರೀಮತಿ ಪ್ರಿಯ ಮತ್ತು ಶ್ರೀಮತಿ ರೇಖಾ ಮಾಹಿತಿ ನೀಡಿದರು. ಭವ್ಯ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ನಿರಂಜನ್, ಆಶೀರ್ವಾದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ವಿದ್ಯಾ, ಎಮ್ ಬಿ ಕೆ ಭವಾನಿ, ಎಲ್ ಸಿ ಆರ್ ಪಿ ಅರುಣಾಕ್ಷಿ, ಹಸಿರು ದಳ ಮೇಲ್ವಿಚಾರಕರka ಸಾಂತಪ್ಪ ಉಪಸ್ಥಿತರಿದ್ದರು.
ಪಲ್ಲವಿ, ಕಾರ್ಯಕ್ರಮ ನಿರೂಪಿಸಿದರು.