
ನವದೆಹಲಿ: ಭಾರತದ ಹೈದರಾಬಾದ್‌ನಲ್ಲಿರುವ ರಸ್ತೆಯೊಂದಕ್ಕೆ ತಮ್ಮ ಹೆಸರಿಟ್ಟಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೃತಜ್ಞತೆ ಸಲ್ಲಿಸಿದ್ದಾರೆ. ಈ ರೀತಿ ಗೌರವ ಪಡೆದ ಮೊದಲ ಅಮೆರಿಕದ ಅಧ್ಯಕ್ಷರು ನಾನು ಎಂದು ಹೇಳಿಕೊಂಡಿದ್ದಾರೆ.ದಕ್ಷಿಣ ಭಾರತದ ನಗರದಲ್ಲಿ ಅಮೆರಿಕ ಕಾನ್ಸುಲೇಟ್‌ಗೆ ಹೊಂದಿಕೊಂಡಿರುವ ರಸ್ತೆಗೆ ತೆಲಂಗಾಣ ಸರ್ಕಾರ ʼಡೊನಾಲ್ಡ್ ಟ್ರಂಪ್ ಅವೆನ್ಯೂʼ ಎಂದು ಹೆಸರಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಶುಕ್ರವಾರ ಟ್ರುತ್ ಸೋಶಿಯಲ್ ಮೀಡಿಯಾದಲ್ಲಿ ಟ್ರಂಪ್ ಕೃತಜ್ಞತೆ ಸಲ್ಲಿಕೆ ಮಾಡಿದ್ದಾರೆ.
ಭಾರತದ ಹೈದರಾಬಾದ್‌ನಲ್ಲಿರುವ ಹೊಸ ಡೊನಾಲ್ಡ್ ಟ್ರಂಪ್ ಅವೆನ್ಯೂ. ಈ ರೀತಿ ಗೌರವಿಸಲ್ಪಟ್ಟ ಮೊದಲ ಅಮೆರಿಕದ ಅಧ್ಯಕ್ಷ ನಾನು. ಧನ್ಯವಾದಗಳು ಎಂದು ಟ್ರಂಪ್ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ಈ ಫಲಕವನ್ನು ಅನಾವರಣಗೊಳಿಸುತ್ತಿರುವ ಛಾಯಾಚಿತ್ರವನ್ನು ಹಂಚಿಕೊಂಡಿದ್ದರು.











