ಮೀನುಗಾರರ ಧ್ವನಿಯಾಗಿ ನಾಯಕರಾದ ಅಶೋಕ್ ಪೂಜಾರಿ ಬೀಜಾಡಿಯವರು ಮಾನ್ಯ ಕೆಪಿಸಿಸಿ ಅಧ್ಯಕ್ಷರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮಹತ್ವದ ಮನವಿ ಸಲ್ಲಿಕೆ

ಅಧಿಕಾರ ಮುಖ್ಯವಲ್ಲ, ಜನರ ಸೇವೆ ಮತ್ತು ಕಳಕಳಿ ಮುಖ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ನಮ್ಮ ಹೆಮ್ಮೆಯ ನಾಯಕರಾದ ಬೀಜಾಡಿಯವರು ಇವತ್ತು ಬೆಂಗಳೂರಿನ ಕೆಪಿಸಿಸಿ ಅಧ್ಯಕ್ಷರ ನಿವಾಸದಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಶ್ರೀ ಅಶೋಕ್ ಪೂಜಾರಿ ಬೀಜಾಡಿಯವರು ಕರಾವಳಿ ತೀರದ ಮೀನುಗಾರರ ಬದುಕಿನ ಹಿತದೃಷ್ಟಿಯಿಂದ ಹಲವು ವಿಶೇಷ ಪ್ರಮುಖ ಬೇಡಿಕೆಗಳು ಹಾಗೂ ಮೀನುಗಾರರ ಬದುಕಿನ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೋರಿ ಹಿರಿಯ ನಾಯಕರಾದ ಮಾನ್ಯ ಶ್ರೀ ಬಿ. ಕೆ. ಹರಿಪ್ರಸಾದ್ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕ್ಷೇತ್ರದ ಶಾಸಕರು ಹಾಗೂ ಸಂಸದರು ಮಾಡಬೇಕಾದ ಜವಾಬ್ದಾರಿಯುತ ಕೆಲಸವನ್ನು, ಸಾಮಾನ್ಯ ಜನರ ಧ್ವನಿಯಾಗಿ ಒಬ್ಬ ಜಾಗೃತ ಜನನಾಯಕರಾಗಿ ಶ್ರೀ ಅಶೋಕ್ ಪೂಜಾರಿಯವರು ಸ್ವತಃ ಮುಂಚೂಣಿಯಲ್ಲಿ ನಿಂತು ಮಾಡುತ್ತಿರುವುದು ಇಡೀ ಕರಾವಳಿ ಜನತೆಗೆ ಹೆಮ್ಮೆಯ ವಿಷಯವಾಗಿದೆ.
ಮನವಿಯಲ್ಲಿರುವ ಪ್ರಮುಖ ಬೇಡಿಕೆಗಳು
*ಮತ್ಸ್ಯಾಶ್ರಯ ಯೋಜನೆ: ಮೀನುಗಾರರ ಮನೆ ನಿರ್ಮಾಣದ ಸಹಾಯಧನವನ್ನು ₹1,20,000 ದಿಂದ ₹3,00,000 ಕ್ಕೆ ಹೆಚ್ಚಿಸುವುದು..*
*ಮಹಿಳಾ ಮೀನುಗಾರರ ನೆರವು: ಸ್ವಸಹಾಯ ಗುಂಪುಗಳ ಸಾಲಕ್ಕೆ ಸಕಾಲದಲ್ಲಿ ಬಡ್ಡಿ ಸಹಾಯಧನ ಮಂಜೂರು ಮಾಡುವುದು..*
*ಜೀವರಕ್ಷಕ ಸಾಧನಗಳು: ಆಕಸ್ಮಿಕ ದೋಣಿ ಅಪಘಾತ ತಡೆಯಲು ಅಗತ್ಯ ಜೀವರಕ್ಷಕ ಜಾಕೆಟ್‌ಗಳನ್ನು ಇಲಾಖೆಯಿಂದ ಒದಗಿಸುವುದು..*
*ತುರ್ತು ಪರಿಹಾರ: ಮೀನುಗಾರಿಕೆಯಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡ ಮೀನುಗಾರರಿಗೆ ತಕ್ಷಣದ ತುರ್ತು ಪರಿಹಾರ ನೀಡುವುದು..*
*ಸಾಂಪ್ರದಾಯಿಕ ಮೀನುಗಾರಿಕೆಗೆ ಉತ್ತೇಜನ ಮಿನಿ ಕೈರಂಪಣಿ ಬಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಕರಾವಳಿಯ* *ಪರಂಪರೆಯನ್ನು ಉಳಿಸುವುದು. ಹಾಗೂ ಇನ್ನು ಹಲವು ಬೇಡಿಕೆಗಳನ್ನು ಸಲ್ಲಿಸಲಾಯಿತು…*
ಕರಾವಳಿಯ ಮೀನುಗಾರರ ಕಷ್ಟಗಳಿಗೆ ಸ್ಪಂದಿಸಿ, ಸರ್ಕಾರದ ಮಟ್ಟದಲ್ಲಿ ಜನರ ಧ್ವನಿ ತಲುಪಿಸಲು ಶ್ರಮಿಸುತ್ತಿರುವ ಶ್ರೀ ಅಶೋಕ್ ಪೂಜಾರಿ ಬೀಜಾಡಿಯವರು ಹಾಗೂ ಎಲ್ಲಾ ಪ್ರಮುಖರಿಗೆ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಮೀನುಗಾರರ ಬದುಕು ಹಸನಾಗಲಿ, ಈ ನ್ಯಾಯಸಮ್ಮತ ಎಲ್ಲಾ ಬೇಡಿಕೆಗಳು ಶೀಘ್ರದಲ್ಲೇ ಈಡೇರಲಿ ಎಂದು ಆಶಿಸೋಣ.
ಈ ಸಂದರ್ಭದಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿಯವರು,ಸಂಘದ.CO. ರಮೇಶ್ ಕಾಂಚನ್,ಹಿರಿಯ ಮೀನುಗಾರ ಸಂಘದ ಸದಸ್ಯರಾದ ರಾಮ ಕಾಂಚನ್ ಕೊರವಡಿ, ಯೋಗೀಶ್ ಕುಂದರ್,ರವೀಂದ್ರ ಬೀಜಾಡಿ ಮನೆ ಮತ್ತು ಅಶೋಕ್ ಪೂಜಾರಿ ಚಾತ್ರಬೆಟ್ಟು ಉಪಸ್ಥಿತರಿದ್ದರು.
ಮೀನುಗಾರರ ಹಿತ ಕಾಯಲು ಸದಾ ಶ್ರಮಿಸುವ ನಮ್ಮ ನಾಯಕರು ಹಾಗೂ ಇಲಾಖೆಯ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು.











