ಐತಿಹಾಸಿಕ ದಾಖಲೆ ನಿರ್ಮಿಸಿದ ಅಶೋಕ್ ಕುಮಾರ್ ರೈ ನೇತೃತ್ವದ ಉಪ್ಪಿನಂಗಡಿ ” ವಿಜಯ – ವಿಕ್ರಮ ” ಕಂಬಳ ; ಫೆ.29 ಬೆಳಗ್ಗೆ 9.00 ರಿಂದ ಮಾ.1 ರಾತ್ರಿ 9.00 ರ ವರೆಗೆ ಅದ್ದೂರಿಯಾಗಿ ನಡೆದ ಕೂಟ – ನಿರಂತರ ” ಕಹಳೆ ನ್ಯೂಸ್ ನೇರಪ್ರಸಾರ ” – ದೇಶ ವಿದೇಶದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ – ಕಹಳೆ ನ್ಯೂಸ್

ಪುತ್ತೂರು : ಸಾಮಾಜಿಕ, ಧಾರ್ಮಿಕ ಮುಖಂಡ, ಉದ್ಯಮಿ, ರೈ ಎಸ್ಟೇಟ್ ಕೋಡಿಂಬಾಡಿ ಇದರ ಮಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರ ನೇತೃತ್ವದಲ್ಲಿ ಜರಗುವ 35ನೇ ವರ್ಷದ ಉಪ್ಪಿನಂಗಡಿ “ವಿಜಯ – ವಿಕ್ರಮ” ಜೋಡುಕರೆ ಕಂಬಳ ಕೂಟ ಇತಿಹಾಸವನ್ನು ನಿರ್ಮಿಸಿದೆ.
ಈ ವರ್ಷದ ಕಂಬಳ ಕೂಟದಲ್ಲಿ ಎರಡು ರಾತ್ರಿಯವರೆಗೆ ಕಂಬಳ ಜರಗಿ ನೂತನ ದಾಖಲೆಯನ್ನು ಉಪ್ಪಿನಂಗಡಿ ಕಂಬಳ ದಾಖಲಿಸಿದೆ.

ಫೆ.29ರಂದು ಬೆಳಿಗ್ಗೆ 9.00 ಗಂಟೆಗೆ ಪ್ರಾರಂಭವಾದ ಕಂಬಳ ಮಾ.1 ರ ರಾತ್ರಿ 9 ಗಂಟೆಯವರೆಗೆ ನಡೆದು ಕಂಬಳದ ಚರಿತ್ರೆಯಲ್ಲಿ ಇದೊಂದು ಚಾರಿತ್ರಿಕ ದಾಖಲೆಯಾಗಿದೆ.
ಕಹಳೆ ನ್ಯೂಸ್ YouTube ಹಾಗೂ Facebook ನಲ್ಲಿ ನಿರಂತರವಾಗಿ ಫೆ.29 ಬೆಳಗ್ಗೆ 9.00 ರಿಂದ ಮಾ.1 ರಾತ್ರಿ 9.00 ರ ವರೆಗೆ ನೇರಪ್ರಸಾರ ನೀಡಿದ್ದು 2 ಲಕ್ಷಕ್ಕೂ ಅಧಿಕ ಮಂದಿ ದೇಶ – ವಿದೇಶದಿಂದ ವೀಕ್ಷಿಸಿ ಜನಮೆಚ್ಚಗೆಗೆ ಪಾತ್ರವಾಗಿದೆ.
![]()
![]()
![]()
![]()
ಸಂಜೆ 6.00 ರಿಂದ ಬೆಳಗ್ಗೆ 6.00 ರ ತನಕ ಕಹಳೆನ್ಯೂಸ್ ನ LED Screen ಮೂಲಕ ಸಾವಿರಾರು ಮಂದಿಗೆ ಕಂಬದ ಸ್ಥಳದಲ್ಲೇ ವೀಕ್ಷಣೆಗೆ ಸಹಾಯಕವಾಗುವಂತೆ ವ್ಯವಸ್ಥೆ ಕಲ್ಪಿಸಿದ ಅಶೋಕ್ ಕುಮಾರ್ ರೈಯವರಿಗೆ ಕಹಳೆನ್ಯೂಸ್ ವೀಕ್ಷಕರಿಂದ ಅಭಿನಂದನೆ.
![]()
ಫಲಿತಾಂಶ : ಈ ಬಾರಿಯ ವಿಜಯ- ವಿಕ್ರಮ ಕಂಬಳದಲ್ಲಿ ೧೪೨ ಜೊತೆ ಕೋಣಗಳು ಪಾಲುಪಡೆದಿದೆ.
ಕನೆಹಲಗೆ ವಿಭಾಗ: ಬಾರಕೂರು ಶಾಂತರಾಮ ಶೆಟ್ಟಿ ( ಕೋಣ ಓಡಿಸಿದವರು: ಮಂದಾರ್ತಿ ಶೀರೂರು ಗೋಪಾಲ ನಾಯ್ಕ) ಹಾಗೂ ವಾಮಂಜೂರು ತಿರುವೈಲುಗುತ್ತು ಅಭಯ ನವೀನ್‌ಚಂದ್ರ ಆಳ್ವ (ಕೋಣ ಓಡಿಸಿದವರು: ಬೈಂದೂರು ಭಾಸ್ಕರ್) ಆರೂವರೆ ಕೋಲು ನಿಶಾನಿಗೆ ನೀರು ಹಾಯಿಸುವ ಮೂಲಕ ಬಹುಮಾನವನ್ನು ತಮ್ಮದಾಗಿಸಿಕೊಂಡಿವೆ.
ಹಗ್ಗ ಹಿರಿಯ ವಿಭಾಗ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಬಿ) ( ಕೋಣ ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್- 10.೪೪ಸೆ.) ಪ್ರಥಮ ಬಹುಮಾನವನ್ನು ತನ್ನದಾಸಿಕೊಂಡರೆ, ನಂದಳಿಕೆ ಶ್ರೀಕಾಂತ್ ಭಟ್ (ಎ) (ಕೋಣ ಓಡಿಸಿದವರು: ವಿಜಾರು ಅಶ್ವಥಪುರ ಶ್ರೀನಿವಾಸ ಗೌಡ- ೧೦.೫೦ ಸೆ.) ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹಗ್ಗ ಕಿರಿಯ ವಿಭಾಗ: ಏರ್ಮಾಳು ರೋಹಿತ್ ಹೆಗ್ಡೆ (ಬಿ) (ಕೋಣ ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ- ೧೪.೧೨ಸೆ.) ಪ್ರಥಮ ಹಾಗೂ ಮಿಜಾರು ಪ್ರಸಾದ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ (ಕೋಣ ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ- ೧೪.೨೧ ಸೆ.) ದ್ವಿತೀಯ ಬಹುಮಾನ ಪಡೆದಿದ್ದಾರೆ.
ಅಡ್ಡ ಹಲಗೆ: ಬೋಳಾರ ತ್ರಿಶಾಲ್ ಕೆ. ಪೂಜಾರಿ (ಬಿ) (ಕೋಣ ಓಡಿಸಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ ೧೪.೪೩) ಪ್ರಥಮ ಹಾಗೂ ಮೋರ್ಲಾ ಗಿರೀಶ್ ಆಳ್ವ (ಕೋಣ ಓಡಿಸಿದವರು: ನಾರಾವಿ ಯುವರಾಜ್ ಜೈನ್ – ೧೪.೮೨ಸೆ.) ದ್ವಿತೀಯ ಬಹುಮಾನ ಪಡೆದಿದ್ದಾರೆ.
ನೇಗಿಲು ಹಿರಿಯ: ಮೂಡಬಿದ್ರೆ ನ್ಯೂ ಪಡಿವಾಳ, ಹಾರ್ದಿಕ್ ಹರ್ಷವರ್ಧನ ಪಡಿವಾಳ್ (ಕೋಣ ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ – ೧೪.೦೭) ಪ್ರಥಮ ಹಾಗೂ ಕಕ್ಯಪದವು ಪೆಂರ್ಗಾಲ್ ಬಾಬು ವೆಂಕಪ್ಪ ಗೌಡ (ಬಿ) ( ಕೋಣ ಓಡಿಸಿದವರು: ಬೆಳ್ಳಾರೆ ಪನ್ನೆ ನಾಸೀರ್- ೧೪.೪೩ ಸೆ.) ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ನೇಗಿಲು ಕಿರಿಯ: ಉಡುಪಿ ಹಿರೆಬೆಟ್ಟು ಶಂಕರದೇವಾಡಿಗ (ಕೋಣ ಓಡಿಸಿದವರು: ಹಿರೇಬೆಟ್ಟು ಆಕಾಶ್ – ೧೪.೪೩ಸೆ.) ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಸಿದ್ದಕಟ್ಟೆ ಹೊಂಗಾರಹಿತ್ಲು ಮೋಕ್ಷಿತ್ ಕಾಂತಣ್ಣ ಶೆಟ್ಟಿ (ಕೋಣ ಓಡಿಸಿದವರು: ಬಾರಾಡಿ ನತೇಶ್ – ೧೪.೮೮ ಸೆ.) ತಮ್ಮದಾಗಿಸಿಕೊಂಡಿದ್ದಾರೆ.











