
ಬೆಂಗಳೂರು: ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇರಾನ್ – ಇಸ್ರೇಲ್ ಯುದ್ಧ ಕಾರ್ಮೋಡ ಸರಿದ ಬಳಿಕ ಚಿನ್ನ-ಬೆಳ್ಳಿ ದರ ಇಳಿಕೆಯತ್ತ ಮುಖ ಮಾಡಿದೆ.
ಇರಾನ್ – ಇಸ್ರೇಲ್ ಸಂಘರ್ಷದ ಕಾರ್ಮೋಡ ಸರಿದ ಬೆನ್ನಲ್ಲೇ, ದೇಶದಲ್ಲಿ ಚಿನ್ನ ಬೆಳ್ಳಿ ದರ ಭಾರೀ ಇಳಿಕೆ ಕಂಡಿದೆ. ಕಳೆದ ಒಂದು ವಾರದಲ್ಲಿ ಚಿನ್ನ 10 ಗ್ರಾಂ ಗೆ 5 ಸಾವಿರ ರೂ. ನಷ್ಟು ಇಳಿಕೆಯಾಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಇಂದು 14,030 ರೂ. ಇದೆ. ಇನ್ನೂ 22 ಕ್ಯಾರೆಟ್ ಬೆಲೆ ಗ್ರಾಂ ಗೆ ಇಂದು 12,845 ರೂ. ಇದೆ.











