Monday, April 27, 2026
ಸುದ್ದಿ

ಭಾರತದ ಸಂಸ್ಕೃತಿ, ಪರಂಪರೆ ರಕ್ಷಣೆಗೆ ಕೇಂದ್ರದಿಂದ `ರಾಷ್ಟ್ರೀಯ ಮಿಷನ್’ : ಪ್ರಧಾನಿ ಮೋದಿ ಘೋಷಣೆ-ಕಹಳೆ ನ್ಯೂಸ್

ಕೋಲ್ಕತ್ತಾ : ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಮಿಷನ್ ಆರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯನ್ನು ಮರು ಆವಿಷ್ಕಾರ, ಮರು ಹಂಚಿಕೆ, ಮರು ನವೀನ ಮತ್ತು ರಕ್ಷಿಸಲು ಕೋಲ್ಕತ್ತಾದಿಂದ ರಾಷ್ಟ್ರೀಯ ಮಿಷನ್ ಆರಂಭಿಸುತ್ತಿದ್ದೇವೆ ಎಂದು ಘೋಷಿಸಿದರು.

ರಾಷ್ಟ್ರೀಯ ಮಿಷನ್ ಅನ್ನು ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಮ್ ನಿಂದ ಆರಂಭಿಸುತ್ತಿದ್ದೇವೆ. ದೇಶದಲ್ಲಿ 5 ಸಾಂಪ್ರದಾಯಿಕ ವಸ್ತು ಸಂಗ್ರಹಾಲಯಗಳನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.