Monday, April 27, 2026
ಸುದ್ದಿ

ರಹಾನೆ ವಡಾಪಾವ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಚಿನ್-ಕಹಳೆ ನ್ಯೂಸ್

ರಹಾನೆ ವಡಾಪಾವ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಚಿನ್.!

ನವದೆಹಲಿ: ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರ ವಡಪಾವ್ ಈಗ ಸುದ್ದಿಯಲ್ಲಿದೆ.

ಇದಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದು, ತಮಗೂ ಎಷ್ಟರ ಮಟ್ಟಿಗೆ ಇಷ್ಟ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಅಭಿಮಾನಿಗಳನ್ನು ಮತ್ತಷ್ಟು ಪುಳಕಿತಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಡಾಪಾವ್ ಒಂದನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೊವನ್ನು ರಹಾನೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಒಂದು ಪ್ರಶ್ನೆಯನ್ನು ಕೇಳಿ, 3 ಆಯ್ಕೆಗಳನ್ನು ನೀಡಿದ್ದರು.

ನಿಮಗೆ ವಡಾಪಾವ್ ಹೇಗೆ ತಿನ್ನುವುದು ಇಷ್ಟ ?
– ಚಹಾ ಜೊತೆಗೆ ವಡಾಪಾವ್
– ಚಟ್ನಿ ಜತೆಗೆ ವಡಾಪಾವ್
– ಕೇವಲ ವಡಾಪಾವ್

ಇದಕ್ಕೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದು , ನನಗೆ ಚಟ್ನಿ ಜೊತೆ ತಿನ್ನಲು ಬಲು ರುಚಿಯಾಗಿರುತ್ತದೆ. ಅದರಲ್ಲಿ ಸ್ವಲ್ಪ ಕೆಂಪು ಚಟ್ನಿ ಇನ್ನೊಂದು ಸ್ವಲ್ಪ ಗ್ರೀನ್ ಚಟ್ನಿ ಹಾಗೂ ಒಂದು ಚೂರು ಹುಣಸೆಹಣ್ಣಿನ ಚಟ್ನಿ ನೆಂಚಿಕೊಂಡು ತಿಂದರೆ ಅದರ ರುಚಿಯೇ ಬೇರೆ ಎಂದು ಬರೆದುಕೊಂಡಿದ್ದಾರೆ.

ಸಚಿನ್ ಅವರ ಈ ಪ್ರತಿಕ್ರಿಯೆಗೆ ಅಭಿಮಾನಿಗಳು ಖುಷಿ ಆಗಿದ್ದು ಕಮೆಂಟ್ ಗಳ ಮಹಾಪೂರವೇ ಹರಿದು ಬಂದಿದೆ.

How do you like your vada pav?
1. Vada pav with chai
2. Vada pav with chutney
3. Just Vada pav

View image on Twitter