ಬೆಂಗಳೂರು: ಕಳೆದ ಎರಡು ದಿನಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನ ಬೆಳ್ಳಿಯ ದರ, ಇದೀಗ ಭಾನುವಾರ ಅಲ್ಪ ಏರಿಕೆಯಾಗಿದೆ. .

ದೇಶದಲ್ಲಿ ಗ್ರಾಂ ಚಿನ್ನಕ್ಕೆ 1 ರೂ ಏರಿಕೆಯಾಗಿದ್ದು 3,901 ರೂ. ಆಗಿದೆ. ಬೆಳ್ಳಿ ಬೆಲೆಯಲ್ಲೂ 1 ರೂ ಏರಿಕೆಯಾಗಿದ್ದು ಕೆಜಿಗೆ 49,160ರೂ ಇದೆ. ಇನ್ನು, ಬೆಂಗಳೂರಿನಲ್ಲಿ ಚಿನ್ನದ ಬೆಲೆ 1 ಗ್ರಾಂಗೆ 3,726 ರೂ. ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 37,260 ರೂ. ಇದೆ. ಇನ್ನು, ಇದೇ ರೀತಿ 1 ಕೆಜಿ ಬೆಳ್ಳಿ ಬೆಲೆ 49,160 ರೂ. ಆಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 39,010 ರೂಪಾಯಿ ತಲುಪಿದ್ದು, ಒಂದು ಕೆ.ಜಿ. ಬೆಳ್ಳಿ ದರ 49,160ರೂಪಾಯಿ ಇದೆ.
ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 39,010 ರೂ ಮತ್ತು ಕೆ.ಜಿ. ಬೆಳ್ಳಿ ದರ 49,160 ರೂ ಇದೆ. ಕೋಲ್ಕತಾದಲ್ಲಿ ಇಂದು 10 ಗ್ರಾಂ ಆಭರಣದ ಬೆಲೆ 39,400 ರೂಪಾಯಿ ಮತ್ತು ಬೆಳ್ಳಿ ದರ 49,160ರೂಪಾಯಿ ಇದೆ. ಚೆನ್ನೈನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 38,210 ರೂ ಮತ್ತು ಒಂದು ಕೆ.ಜಿ. ಬೆಳ್ಳಿ ದರ 49,160 ರೂಪಾಯಿ ಇದೆ.









