ಆರೋಗ್ಯವೇ ಭಾಗ್ಯ ಅನ್ನೋದು ನಮಗೆಲ್ಲರಿಗೂ ತಿಳಿದಿರೋ ವಿಚಾರ. ಆರೋಗ್ಯ ಚೆನ್ನಾಗಿರಬೇಕು ಅನ್ನೋ ಕಾರಣಕ್ಕಾಗಿ ಅನೇಕ ಕಸರತ್ತುಗಳನ್ನ ಮಾಡುತ್ತೇವೆ. ಅಲ್ಲದೆ ಅನಾರೋಗ್ಯ ಉಂಟಾದರೆ ಆಸ್ಪತ್ರೆ ಮೆಡಿಕಲ್ ಎಂದು ಅನೇಕ ಕಡೆಗಳಿಗೆ ಅಲೆದು, ಸಾಕಷ್ಟು ಹಣನೂ ಖರ್ಚಿ ಮಾಡುತ್ತೇವೆ.
ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಕಡೆ ಉಚಿತ ವೈದ್ಯಕೀಯ ಶಿಬಿರಗಳು ನಡೆಯುತ್ತಲೆ ಇದೆ. ಅಂತೆಯೇ ನಾಳೆ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಪೆರ್ನೆ ಶ್ರೀ ರಾಮಚಂದ್ರ ಪದವಿಪೂರ್ವ ಕಾಲೇಜುನಲ್ಲಿ ಉಚಿತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಬಿರ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.









