ನಾಳೆ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕಾರ್ಲ ಇಲ್ಲಿ ಗಿರಿಜ ಮತ್ತು ಮಕ್ಕಳ ಸೇವೆಯ ಅಂಗವಾಗಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ -ಕಹಳೆ ನ್ಯೂಸ್

ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರ ಆಶ್ರಯದಲ್ಲಿ ನಾಳೆ ರಾತ್ರಿ 9.30 ಕ್ಕೆ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕಾರ್ಲ ಗಿರಿಜ ಮತ್ತು ಮಕ್ಕಳ ಸೇವೆಯ ಅಂಗವಾಗಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಗಿರಿಜರವರ ಮನೆಯ ಮುಂಭಾಗ ನಡೆಯಲಿದೆ.
ಚೌಕಿ ಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದ್ದು, ಪುರಾಣ ಪುಣ್ಯ ಕಥಾ ಭಾಗವನ್ನು ಸೇವಾ ಬಯಲಾಟವಾಗಿ ಆಡಿ ತೋರಿಸಲಿರುವರು. ಈ ಪ್ರಯುಕ್ತ ಕಲಾಭಿಮಾನಿಗಳಾದ ತಾವೆಲ್ಲರೂ ಬಂದು ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಿ, ಈ ಯಕ್ಷಗಾನ ಬಯಲಾಟವನ್ನು ಚಂದಗಾಣಿಸಿಕೊಡಬೇಕಾಗಿ ಅಪೇಕ್ಷಿಸುವ ಗಿರಿಜ ಮತ್ತು ಮಕ್ಕಳು ಕಾರ್ಲ ಪೆರ್ನೆ









