
ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜ.12ರಂದು ವಿವೇಕಾನಂದ ಜಯಂತಿ ಕಾರ್ಯಕ್ರಮ
ನೆಹರೂನಗರದ ವಿವೇಕಾನಂದ ಕ್ಯಾಂಪಸ್‍ನಲ್ಲಿ ನಡೆಯಲಿದೆ.
ನೆಲ-ನೆಲೆ ಮತ್ತು ಶಿಕ್ಷಣ ಎಂಬ ಆಶಯದ ಮೇಲೆ ಈ ಬಾರಿಯ ವಿವೇಕಾನಂದ ಜಯಂತಿ ಆಯೋಜನೆಗೊಳ್ಳುತ್ತಿದೆ.
ಈ ಬಾರಿಯ ವಿವೇಕಾನಂದ ಜಯಂತಿಯ ಆಸಕ್ತಿಯ ಕೇಂದ್ರವಾದ ಶಿಶುಸಂಗಮ- ಚಿಣ್ಣರ ಸಮ್ಮೇಳನ. ವಿವೇಕಾನಂದ
ವಿದ್ಯಾವರ್ಧಕ ಸಂಘ ಮುನ್ನಡೆಸುವ 19 ಶಿಶುಮಂದಿರ ಅಲ್ಲದೆ ಇನ್ನೂ ಹಲವು ಶಿಶುಮಂದಿರಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು, 80ಕ್ಕೂ ಹೆಚ್ಚು ಮಂದಿ ಮಾತಾಜಿಯವರು ಆಗಮಿಸಲಿದ್ದಾರೆ.
ಈ ಸಂಗಮಕ್ಕೆ ಆಗಮಿಸಲಿರುವ ಮಕ್ಕಳಿಗೆ ಬೆಳಗ್ಗೆ 10 ಗಂಟೆಯಿಂದ ಅಪರಾಹ್ನದವರೆಗೆ ವಿವಿಧ ಚಟುವಟಿಕೆಗಳನ್ನು
ಏರ್ಪಡಿಸಲಾಗಿದೆ. ಅದಕ್ಕಾಗಿ ವಿವೇಕಾನಂದ ಕಾಲೇಜು ಆವರಣದಲ್ಲಿ ಗುಹೆಯನ್ನು ನಿರ್ಮಿಸಲಾಗಿದೆ. ಹಲವು ರೀತಿಯ ಆಟಿಕೆ,
ಜೋಕಾಲಿಗಳನ್ನು ಜೋಡಿಸಲಾಗಿದೆ. ಬಣ್ಣ ಬಣ್ಣದ ಚಿತ್ತಾರಗಳನ್ನು ರಚಿಸಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಿಕೊಳ್ಳಬೇಕಾದ ಎಲ್ಲಾ ವ್ಯವಸ್ಥೆಯನ್ನು ಸಿದ್ಧಗೊಳಿಸಲಾಗಿದೆ.
ಇದರೊಂದಿಗೆ ಶಿಶುಮಂದಿರದ ಮಕ್ಕಳ ಪೋಷಕರೊಂದಿಗೆ ಮಕ್ಕಳ ಭವಿಷ್ಯ, ಬೆಳೆಯಬೇಕಾದ ರೀತಿ ನೀತಿಗಳ ಬಗೆಗೆ
ಪ್ರತ್ಯೇಕವಾಗಿ ಮೂರು ಗೋಷ್ಠಿಗಳ ಮುಖಾಂತರ ಸಮಾಲೋಚನ ಸಭೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಮೂರು
ಸಭಾಂಗಣವನ್ನು ಗುರುತಿಸಲಾಗಿದ್ದು, ಪ್ರತ್ಯೇಕ ಪ್ರತ್ಯೇಕ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ಜರುಗಲಿದ್ದು ನಂತರ ವಿದ್ಯಾಸಂಸ್ಥೆಗಳ ಹಲವು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ವಿವೇಕಾನಂದ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಸಾಂಸ್ಕøತಿಕ ಲೋಕವನ್ನು ಅನಾವರಣಗೊಳಿಸಲಿದ್ದಾರೆ. ಈ ವರ್ಷದ ವಿವೇಕಾನಂದ ಜಯಂತಿಗೆ ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದ್ದು, ಆಗಮಿಸಿದ ಎಲ್ಲರಿಗೂ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ. ಭೋಜನಕ್ಕಾಗಿಯೇ ಪ್ರತ್ಯೇಕ ಪೆಂಡಾಲ್ ಹಾಕಲಾಗಿದೆ. ನೂರಾರು ಸ್ವಯಂಸೇವಕರು
ಸಾಕಷ್ಟು ಸಿದ್ಧತೆ ನಡೆಸುತ್ತಿದ್ದಾರೆ.









