
ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಸಿಯಾದ್ ಪಿ ಎ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ನಿಶ್ಮಿತಾ ಇವರು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಎನ್‍ಟಿಎ ಮೂಲಕ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಡಿಸೆಂಬರ್ 2019ರಲ್ಲಿ ನಡೆಸಲ್ಪಟ್ಟ ರಾಷ್ಟ್ರೀಯ ಅರ್ಹತಾ ಪರೀಕ್ಷೆ-ಯುಜಿಸಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ಸಿಯಾದ್ ಸುಳ್ಯದ ಜಯನಗರ ನಿವಾಸಿ ದಿ| ಅಬೂಬಕ್ಕರ್ ಹಾಗೂ ಆಯಿಷಾ ದಂಪತಿಗಳ ಪುತ್ರ. ವಿಶೇಷ ಸಾಧನೆ ಮಾಡಿದ ನಿಶ್ಮಿತಾ ಕಾಸರಗೋಡು ತಾಲೂಕು ಪಡಿಯಡ್ಪು ನಿವಾಸಿ ಈಶ್ವರ ನಾಯ್ಕ ಹಾಗೂ ಸುಶೀಲ ದಂಪತಿಯ ಪುತ್ರಿ. ಈ ವಿದ್ಯಾರ್ಥಿಗಳು ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗವು ನೆಟ್/ ಕೆಸೆಟ್ ಕುರಿತು ಸಂಯೋಜನೆಗೊಳಿಸಿರುವ ವಿಶೇಷ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.
ಈ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಪೆÇ್ರ. ಲಿಯೋ ನೊರೊನ್ಹಾ, ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ವಿಭಾಗ ಸಂಯೋಜಕ ವಂ. ರಿತೇಶ್ ರೋಡ್ರಿಗಸ್ ಅಭಿನಂದಿಸಿರುತ್ತಾರೆ.









