ಪಡ್ಡಾಯೂರು ಅನ್ನಪೂರ್ಣೇಶ್ವರೀ ಭಜನ ಮಂದಿರ ಮನೆ ಮನೆ ಭಜನಾ ಸಂಕೀರ್ತನೆ, ಸಾರ್ವಜನಿಕ ಶನೈಶ್ವರ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ-ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರೀ ಭಜನಾ ಮಂದಿರದ 15ನೇ ವರ್ಷದ ಪ್ರತಿಷ್ಠೋತ್ಸವ ಕಾರ್ಯಕ್ರಮದ ಅಂಗವಾಗಿ ನೂತನ ರಜತ ಮಂಟಪ ಸಮರ್ಪಣೆ ಮತ್ತು ಎರಡು ವರ್ಷಕ್ಕೊಮ್ಮೆ ನಡೆಯುವ ಮನೆ ಮನೆ ಭಜನ ಸಂಕೀರ್ತನೆ ಜ.30 ರಿಂದ ಫೆ. 15ರ ತನಕ ನಡೆಯಲಿದೆ. ಫೆ. 15
ರಂದು ಸಾರ್ವಜನಿಕ ಶನೈಶ್ವರ ಪೂಜೆ ಹಾಗೂ ದೇಂತಡ್ಕ ಮೇಳದಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಪುತ್ತೂರು ನಗರ ಸಭಾ ಸದಸ್ಯ ಜೀವಂದರ್ ಜೈನ್, ಅನ್ನಪೂರ್ಣೇಶ್ವರೀ ಭಜನ ಮಂದಿರದ ಅಧ್ಯಕ್ಷ ಹರೀಶ್ ನಾೈಕ್ ಮಾಲ್ತೋಟ್ಟು, ಮಂದಿರದ ಕಾರ್ಯದರ್ಶಿ ಬಾಲಕೃಷ್ಣಗೌಡ
ಪಡ್ಡಾಯೂರು, ಮಂದಿರದ ಸಂಚಾಲಕ ಬಾಲಕೃಷ್ಣ ನಾಯಕ್, ಮಂದಿರದ ಅರ್ಚಕ ಸಂತೋಷ ಶೆಣೈ, ಸತೀಶ್‍ನಾಯಕ್ ಮಾಲ್ತೋಟ್ಟು, ಮದುಸೂಧನ್ ಪಡ್ಡಾಯೂರು, ರಾಮಣ್ಣ ಗೌಡ
ಹೊಸಮಾರ್, ರಾಮಣ್ಣಗೌಡ ಪಡ್ಡಾಯೂರು, ಬಾಲಸುಬ್ರಹ್ಮಣ್ಯ ಪಡ್ಡಾಯೂರು, ದಾಮು ನೆಲಪಾಲ್, ಜಯರಾಮ ನೆಲಪಾಲ್, ಕುಸುಮ ಮೊಪ್ಪು, ಮನೋರಮ ಅಮೈ, ವಿಶಾಲಕ್ಷ್ಮಿ, ಗಿರಿಜ ಮೊಪ್ಪು,
ಮೋಹನ ಪಡ್ಡಾಯೂರು ಹಾಗೂ ಭಜನಾರ್ಥಿಗಳು ಉಪಸ್ಥಿತರಿದ್ದರು.









