Recent Posts

Saturday, April 25, 2026
ಸುದ್ದಿ

ಬೆಳ್ಳಾರೆ ಕಾಲೇಜು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಮಕ್ಕಳ ಹಕ್ಕುಗಳು ಮತ್ತು ಪೋಕ್ಸೋ ಕಾಯ್ದೆ2012” ಮಾಹಿತಿ ಕಾರ್ಯಕ್ರಮ – ಕಹಳೆ ನ್ಯೂಸ್

ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ, ಪೆರುವಾಜೆ ಇಲ್ಲಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ” ಮಕ್ಕಳ ಹಕ್ಕುಗಳು ಮತ್ತು ಪೋಕ್ಸೋ ಕಾಯ್ದೆ2012″ ಮಾಹಿತಿ ಕಾರ್ಯಕ್ರಮ ಕಾಲೇಜಿನ ಮಠತ್ತಡ್ಕ ಕೇಶವ ಭಟ್ ಸಭಾಭವನದಲ್ಲಿ ನಡೆಯಿತು.


ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಕಾಂತರಾಜು.ಸಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ಮಕ್ಕಳಿಗೆ ಬಾಲ್ಯ ಜೀವನದಲ್ಲಿ ಸರಿಯಾದ ಪಾಲನೆ,ಪೆÇೀಷಣೆ,ಶಿಕ್ಷಣ ಆದಾಗ ಮಾತ್ರ ಮಕ್ಕಳು ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ,ಎಲ್ಲರೂ ಮಕ್ಕಳ ಹಕ್ಕಗಳ ಬಗ್ಗೆ ಅರಿಯಬೇಕಾದದ್ದು ಅತೀ ಅಗತ್ಯವೆಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದ ಪಡಿ ಸಂಸ್ಥೆಯ ತರಬೇತಿ ನಿರ್ದೇಶಕರಾದ ಶ್ರೀಮತಿ ಕಸ್ತೂರಿ ಬೊಳುವಾರು ಮಾತನಾಡಿ ಮಕ್ಕಳ ಹಕ್ಕಗಳನ್ನು ಸರಿಯಾಗಿ ಪೂರೈಸದ ಯಾವುದೇ ದೇಶವು ಅಭಿವೃದ್ಧಿ ಹೊಂದಿದ ದೇಶವಾಗಲು ಸಾಧ್ಯವಿಲ್ಲ, ಮಕ್ಕಳ ಹಕ್ಕುಗಳನ್ನು ಸರಿಯಾಗಿ ಪೂರೈಸಿ ಬೆಳೆಸಿದಾಗ ಮಕ್ಕಳು ಸರಿಯಾದ ಹಾದಿಯಲ್ಲಿ ಬೆಳೆದು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗುತ್ತಾರೆ. ಪೆÇೀಕ್ಸೋ ಕಾಯ್ದೆ 2012ರ ಬಗ್ಗೆ ಮಾತನಾಡಿ ಕಾಯ್ದೆಯಡಿ ಶಿಕ್ಷಾವಿಧಾನ ಮತ್ತು ನ್ಯಾಯದಾನ ಇತ್ಯಾದಿ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದರು.

ಪ್ರಾಂಶುಪಾಲರದ ಪೆÇ್ರ. ರಾಘವ ಎನ್ ಅಧ್ಯಕ್ಷತೆ ವಹಿಸಿದ್ದರು,ವೇದಿಕೆಯಲ್ಲಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಧರಾದ ಡಾ.ಸುಪ್ರಿಯಾ ಪಿ.ಆರ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷರಾದ ಲವೀಶ್ ಕುಮಾರ್ .ಪಿ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರು,ವಿದ್ಯಾರ್ಥಿಗಳು ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.