Recent Posts

Saturday, April 25, 2026
ಸುದ್ದಿ

ಭ್ರಷ್ಟಾಚಾರ ನಿಗ್ರಹ ದಳದಿಂದ ಲಂಚಕೋರ ಅಂದರ್ – ಕಹಳೆ ನ್ಯೂಸ್

ಬೆಳ್ತಂಗಡಿ: ಉರುವಾಲು ಗ್ರಾಮದ ನಿವಾಸಿಯಾಗಿರು ಗೋಪಾಲಕೃಷ್ಣ ಹೇರಲೆಯವರ ಜಾಗದಲ್ಲಿನ ಮಹಾಗನಿ ಮರಗಳನ್ನು ಕಡಿಯಲು ಅನುಮತಿ ದೊರಕಿಸಿ ಕೊಡುವಂತೆ ಉರುವಾಲಿನ ನಿವಾಸಿಯಾದ ಸಿದ್ದಿಕ್ ಗ್ರಾಮದ ಅರಣ್ಯ ರಕ್ಷಕರಾದ ಸುಧೀರ್ ಎನ್ ಇವರ ಬಳಿ ಮನವಿ ಮಾಡಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಅರಣ್ಯ ರಕ್ಷಕ‌ ಸುಧೀರ್ ಇದಕ್ಕೆ ಪರ್ಮಿಟ್ ಅಗತ್ಯವಿಲ್ಲ, ಇದಕ್ಕೆ ನಾನೇ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತೇನೆ. ಇದಕ್ಕೆ 15,000 ರೂಗಳನ್ನು ನನಗೆ ಕೊಡಿ ಎಂದು ಲಂಚದ ಬೇಡಿಕೆ ಇಟ್ಟಿದ್ದರು. ಈ ಪ್ರಕಾರ 10,000 ಹಣವನ್ನು ಮುಂಗಡವಾಗಿ ಸುಧೀರ್ ಗೆ ನೀಡಿದ್ದಾರೆ.

ಆದರೆ ಸುಧೀರ್ ಮತ್ತೆ ಹೆಚ್ಚುವರಿ ಲಂಚದ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ಆರೋಪಿ ಸುಧೀರ್ ನಟ್ಟಿಬೈಲ್ ನ ಮನೆಯಲ್ಲಿ ಸ್ವೀಕರಿಸುವ ಸಮಯದಲ್ಲೆ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಧೀರ್ ಸಿಕ್ಕಿಬಿದ್ದಿದ್ದಾರೆ. ಸುಧೀರ್ ರವರನ್ನು ದಸ್ತಗಿರಿ ಮಾಡಿದ್ದು, ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಎಸಿಬಿ ಪೋಲಿಸ್ ಅಧೀಕ್ಷಕರಾದ ಮಂಜುನಾಥ ಕಾವರಿಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಪೋಲೀಸ್ ನಿರೀಕ್ಷರಾದ ಶ್ಯಾಮ್ ಸುಂದರ್, ಯೋಗೀಶ್ ಕುಮಾರ್, ಸಿಬ್ಬಂದಿ ಹರೀಶ್, ಉಮೇಶ್ , ರಾಧಕೃಷ್ಣ ಕೆ, ರಾಧಕೃಷ್ಣ ಡಿ.ಎ , ಪ್ರಶಾಂತ್, ವೈಶಾಲಿ, ರಾಕೇಶ್ ಹಾಗೂ ಗಣೇಶ್ ಭಾಗವಹಿಸಿದ್ದರು.‌