ಕಳೆದ ವರ್ಷ ಕೇಂದ್ರ ಸರ್ಕಾರ ದೇಶದಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದಿದೆ. ಇದಾದ್ಮೇಲೆ ಪೊಲೀಸ್ ಮತ್ತು ಸಂಚಾರ ಇಲಾಖೆಯಿಂದ ಭಾರಿ ದಂಡ ವಸೂಲಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ಭಾರೀ ಮೊತ್ತದ ದಂಡ ವಿಧಿಸಿರುವ ಅನೇಕ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಈಗ ದಂಡದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
ಗುಜರಾತಿನ ಪೊಲೀಸರು ಐಷಾರಾಮಿ ಕಾರು ಹೊಂದಿರುವ ಮಾಲೀಕನಿಗೆ ಒಂದೆರಡಲ್ಲ ಬರೋಬ್ಬರಿ 27 ಲಕ್ಷ 68 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ರಸ್ತೆ ತೆರಿಗೆ ದಂಡವಾಗಿ 16 ಲಕ್ಷ ರೂಪಾಯಿ, ತೆರಿಗೆ ದಂಡವಾಗಿ 7.68 ಲಕ್ಷ ರೂಪಾಯಿ, ದಂಡದ ಹೆಸರಿನಲ್ಲಿ 4 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 27 ಲಕ್ಷ 68 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಇದು ದೇಶದಲ್ಲಿ ವಿಧಿಸಲಾದ ಅತಿದೊಡ್ಡ ದಂಡ ಎನ್ನಲಾಗ್ತಿದೆ. ಪೊಲೀಸರು ಈ ಐಷಾರಾಮಿ ಕಾರಿನ ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳೊಂದಿಗೆ ಹಂಚಿಕೊಂಡಿದ್ದಾರೆ. ಎರಡು ವರ್ಷಗಳಿಂದ ಈ ವಾಹನವು ಯಾವುದೇ ತೆರಿಗೆ ಪಾವತಿಸದೆ ಅಹಮದಾಬಾದ್‌ನ ಬೀದಿಗಳಲ್ಲಿ ಸಂಚರಿಸುತ್ತಿದೆ. ಇದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಾಹನದ ಮಾಲೀಕರಿಗೆ 27.68 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.










