Saturday, June 27, 2026
ಸುದ್ದಿ

ಉಪ್ಪಿನಂಗಡಿ ಠಾಣೆಯಲ್ಲಿ ರಿಕ್ಷಾ ಚಾಲಕರ ಹಾಗೂ ಮಾಲಕರ ಜೊತೆ ಸಂವಾದ ಕಾರ್ಯಕ್ರಮ – ಕಹಳೆ ನ್ಯೂಸ್

ಉಪ್ಪಿನಂಗಡಿ ಠಾಣಾಧಿಕಾರಿಗಳಿಂದ ರಿಕ್ಷಾ ಚಾಲಕರ ಹಾಗೂ ಮಾಲಕರ ಸಭೆ ಇಂದು ನಡೆಯಿತು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯು ಠಾಣಾಧಿಕಾರಿ ನಂದಕುಮಾರ್ ಹಾಗು ಪಿ. ಎಸ್. ಐ ಪವನ್ ನಾಯಕ್ ನೇತೃತ್ವದಲ್ಲಿ ನಡೆಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಕೆ. ಹೆಚ್.ಅಬ್ದುಲ್ ಲತೀಫ್ ಕರಾಯ, ಉಪಾಧ್ಯಕ್ಷರು ಫಾರೂಕ್ ಝೀನಂದಾಗಿ, ಕಾರ್ಯದರ್ಶಿ ಶೀತಲ್ ಕುಮಾರ್ ರಾಮನಗರ ಹಾಗೂ ಐವತ್ತು ಸದಸ್ಯರನ್ನು ಒಳಗೊಂಡ ಬಹುಮುಖ್ಯವಾದ ಸಭೆ ಇದಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಉಪ್ಪಿನಂಗಡಿ ಠಾಣಾಧಿಕಾರಿ ನಂದಕುಮಾರ್ ಅವರು ರಿಕ್ಷಾ ಚಾಲಕರಿಗೆ ಸುರಕ್ಷತೆ ಬಗ್ಗೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಅಜಾಗರೂಕತೆಯಿಂದ ಚಾಲನೆ ಮಾಡಬಾರದು. ಹಾಗೂ ರಿಕ್ಷದ ಎರಡು ಬದಿಗಳಲ್ಲಿ ಭದ್ರತೆಗೆ ತಡೆ ಮಾಡಿಕೊಳ್ಳಬೇಕು. ಚಾಲಕರು ತಮ್ಮ ಬಳಿ ಎಲ್ಲಾ ದಾಖಲೆ ಪತ್ರಗಳನ್ನೂ ಇಟ್ಟುಕೊಳ್ಳಬೇಕು. ಸುರಕ್ಷತೆಗೆ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದರು.

ನಾಳೆಯಿಂದ ಎಲ್ಲಾ ರಿಕ್ಷಗಳನ್ನೂ ತಪಾಸಣೆ ಮಾಡುತ್ತೇವೆ. ಕಡ್ಡಾಯವಾಗಿ ಎಲ್ಲಾ ಚಾಲಕರು ಸಮವಸ್ತ್ರ ಧರಿಸಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸೂಚನೆ ನೀಡಿದರು. ನಾವು ಜನಸ್ನೇಹಿ ಪೊಲೀಸ್ ಅಧಿಕಾರಿಗಳು ಯಾವುದೇ ಸಲಹೆ ಸಹಕಾರ ಬೇಕಾದಲ್ಲಿ ನಮ್ಮ ಜೊತೆ ಸ್ಪಂದಿಸಿ, ಎಲ್ಲರು ಉತ್ತಮ ಚಾಲಕರಾಗಬೇಕು ಎಂದು ಮನವಿಮಾಡಿಕೊಂಡರು.