Saturday, June 27, 2026
ಉತ್ತರಕನ್ನಡಜಿಲ್ಲೆಸುದ್ದಿ

18 ಲಕ್ಷ ರೂಪಾಯಿ ಮೊತ್ತದ ಸಾಂತೂರು ಅಂಗನವಾಡಿ ಕೇಂದ್ರ ಕಟ್ಟಡ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ – ಕಹಳೆ ನ್ಯೂಸ್

ಉಡುಪಿ : ಕಾಪು ವಿಧಾನಸಭಾ ಕ್ಷೇತ್ರದ ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತೂರು ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 18 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ಇಂದು ದಿನಾಂಕ 26-06-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಜಾಹೀರಾತು

ಈ ಸಂದರ್ಭದಲ್ಲಿ ಸೈಂಟ್ ಲುಕ್ ಚರ್ಚ್ ನ ಧರ್ಮ ಗುರುಗಳಾದ ಶಾಲಿನಿ ಸ್ಟೈನ್, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಜಿಲ್ಲಾ ಸ್ಥಾಪಕ ಅಧ್ಯಕ್ಷರು ಜೆನೆಟ್ ಬರ್ಬೋಜ, ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶಿವರಾಮ ಭಂಡಾರಿ, ರವೀಂದ್ರ ಪ್ರಭು, ಇಂದಿರ ಆಚಾರ್ಯ, ಶರತ್ ಶೆಟ್ಟಿ, ಉದ್ಯಮಿಗಳಾದ ಸುಜಿತ್ ಶೆಟ್ಟಿ ಸಾಂತೂರ್, ಪ್ರಾಂಶುಪಾಲರಾದ ಹರಿ ಹೆಚ್, ಅಂಗನವಾಡಿ ಶಿಕ್ಷಕರಾದ ಯಶೋದ ಪೂಜಾರಿ, ಪಿಲಾರ್ ಸಾಂತೂರ್ ಜವನೆರ್(ರಿ) ಮುದರಂಗಡಿ ಗೌರವಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಸಾಂತೂರ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ, ಗುತ್ತಿಗೆದಾರರಾದ ರಾಘವೇಂದ್ರ ಶೆಟ್ಟಿ ಹಾಗೂ ರಂಜಿತ್ ಪ್ರಭು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು