Recent Posts

Saturday, April 25, 2026
ಸುದ್ದಿ

ಸಜೀಪ ನಡುವಿನಲ್ಲಿ ಅಕ್ರಮ ಗೋವಧೆ: ಆರೋಪಿಗಳು ಪೋಲಿಸರ ಬಲೆಗೆ – ಕಹಳೆ ನ್ಯೂಸ್

ಬಂಟ್ವಾಳ: ಸಜೀಪ ನಡುವಿನಲ್ಲಿ ಅಕ್ರಮವಾಗಿ ಗೋವು ವಧೆ ಮಾಡಿ ಮಾರಾಟಕ್ಕೆ ಸಿದ್ದಪಡಿಸುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಇಬ್ಬರು ಆರೋಪಿಗಳನ್ನು ಬಂಧಿಸಿ, ಪರಾರಿಯಾದ ಒರ್ವ ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ.

ಕಡಬ ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಕೆಂಚಬಟ್ರ ನಿವಾಸಿ ದಿ.ಮಹಮ್ಮದ್ ಅವರ ಪುತ್ರ ಆಸೀಫ್ ಹಾಗೂ ಪುತ್ತೂರು ತಾಲೂಕಿನ ಕೊಂಡಿಬಾಳ ಗ್ರಾಮದ ಪನ್ಯ ಬಾಜಿನಡಿ ನಿವಾಸಿ ಉಮ್ಮರ್ ಅವರ ಪುತ್ರ ಆಸಿರ್ ಬಂಧಿತ ಆರೋಪಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಜೀಪ ನಡು ಗ್ರಾಮದ ಗೋಳಿಪಡ್ಪು ಎಂಬಲ್ಲಿ ಉಮ್ಮರ್ ಎಂಬವರ ಮನೆಯ ಹಿಂಬದಿಯ ಖಾಲಿ ಜಮೀನಿನಲ್ಲಿ ಮಾರಾಟ ಮಾಡಿ ಹಣ ಮಾಡುವ ಉದ್ದೇಶದಿಂದ ಜಾನುವಾರು ಒಂದನ್ನು ಕಡಿದು ಮಾಂಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಇಂದು ಮದ್ಯಾಹ್ನ ವೇಳೆ ದಾಳಿ ನಡೆಸಿದಾಗ ಸ್ಥಳದಲ್ಲಿ ಮೂವರು ಆರೋಪಿಗಳು ಜಾನುವಾರು ಕೊಂದು ಮಾಂಸ ಮಾಡುತ್ತರೋದು ಖಚಿತವಾಗಿತ್ತು.