Recent Posts

Saturday, September 12, 2026
ಸುದ್ದಿ

ವೀರಕಂಬ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ ಕಾರ್ಯಕ್ರಮ : ಕಾರ್ಗಿಲ್ ವಿಜಯ ದಿವಸವು ಪ್ರತಿಯೊಬ್ಬ ನಾಗರೀಕನ ಹೆಮ್ಮೆಯ ಸಂಗತಿಯಾಗಿದೆ…ಮೋನಪ್ಪ ಪೂಜಾರಿ ಬಿ ಎಂ- ಕಹಳೆ ನ್ಯೂಸ್

ಕಲ್ಲಡ್ಕ : ಸೈನಿಕನ ಪ್ರತಿಯೊಂದು ಹೆಜ್ಜೆಯಲ್ಲೂ ದೇಶಭಕ್ತಿಯ ಸ್ಪಂದನೆ ಇರುತ್ತದೆ ಅವರನ್ನು ಗೌರವಿಸುವುದು, ದೇಶವನ್ನು ಗೌರವಿಸಿದಂತೆಯೇ ಸರಿ. ದೇಶ ಸೇವೆ ಶಿಸ್ತು ಕೇವಲ ತರಗತಿಗಳಲ್ಲಿ ಪಾಠವನ್ನು ಮಾತ್ರ ಅಲ್ಲದೆ ಜೀವನದಲ್ಲೂ ಅದನ್ನು ಅರ್ಥಪೂರ್ಣವಾಗಿ ಕಲಿತಾಗ ಮಾತ್ರವೇ ದೇಶ ಸೇವೆಯ ಕರ್ತವ್ಯ ಮಾಡಲು ಪ್ರೇರಣೆಯನ್ನು ನೀಡಿದಂತೆ ಆಗುತ್ತದೆ, ಕಾರ್ಗಿಲ್ ವಿಜಯ ದಿವಸವು ಪ್ರತಿಯೊಬ್ಬ ನಾಗರೀಕನ ಹೆಮ್ಮೆಯ ಸಂಗತಿಯಾಗಿದೆ ಎಂಬುದಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಮೋನಪ್ಪ ಪೂಜಾರಿ ಬಿ ಎಂ ರವರು ಹೇಳಿದರು.

ಜಾಹೀರಾತು

ಅವರು ಜುಲೈ 27 ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಕಾರ್ಗಿಲ್ ವಿಜಯ ದಿವಸದ ಆಚರಣೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

27ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ನೆನಪಿಗಾಗಿ ಶಾಲೆಯ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಸೈನಿಕರು ದೇಶದ ರಕ್ಷಣೆಯ ಹೊರತಾಗಿಯೂ ಪರಿಸರ ಪ್ರಜ್ಞೆಯನ್ನು ಮೂಡಿಸುವಲ್ಲಿ ಕರ್ತವ್ಯ ನಿರತರಾಗಿರುತ್ತಾರೆ ಎಂಬುದಾಗಿ ತಿಳಿಸಿಕೊಟ್ಟರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೋನಪ್ಪ ಪೂಜಾರಿ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ನಿವೃತ್ತ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಸುಮತಿ ಮೋನಪ್ಪ ರವರನ್ನು ಶಾಲೆ ಪರವಾಗಿ ಅಭಿನಂದಿಸಲಾಯಿತು.

ಶಿಕ್ಷಕ ತೌಸೀಫ್ ಅಹ್ಮದ್ ರವರು ತರಗತಿ ಕೋಣೆಗಳಲ್ಲಿ ಕೇವಲ ಪಠ್ಯದ ಕಲಿಕೆ ಮಾತ್ರವಲ್ಲದೆ ಅವಕಾಶ ದೊರೆತರೆ ಸ್ಕೌಟ್ ಗೈಡ್ ಸೇವಾದಳ ಎನ್ ಸಿ ಸಿ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿಸ ಬೇಕು ಎಂಬುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಶಿವಪ್ರಸಾದ್, ಬಾಲಕೃಷ್ಣ ಗೌಡ, ವೆಂಕಪ್ಪ ಗೌಡ, ಕ್ಯಾಪ್ಟನ್ ಧನಂಜಯ, ನಿವೃತ್ತ ಆರೋಗ್ಯ ಸುರಕ್ಷಣಾಧಿಕಾರಿಯು ಶಾಲಾ ಹಿರಿಯ ವಿದ್ಯಾರ್ಥಿ ಸುಮತಿ ಮೋನಪ್ಪ ಪೂಜಾರಿ, ವೀರಕಂಬ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಬು ಶರ್ಮ ಶಾಲಾ ವಿದ್ಯಾರ್ಥಿ ನಾಯಕ ಮಹಮದ್ ಹಾರೂನ್ ಫರಹಾನ್ ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿ,
ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸ ಸ್ವಾಗತಿಸಿ ದೈಹಿಕ ಶಿಕ್ಷಕ ಇಂದುಶೇಖರ್ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮಾ ಪಿಜಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಜಯಲಕ್ಷ್ಮಿ, ಸಂಪ್ರಿಯ, ಪಲ್ಲವಿ, ಸುಷ್ಮ ಸಹಕರಿಸಿದರು.