Recent Posts

Saturday, September 12, 2026
ಸುದ್ದಿ

ನಟ ರಕ್ಷಿತ್ ಶೆಟ್ಟಿ ತಂದೆ-ತಾಯಿಗೆ 50ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ-ಕಹಳೆ ನ್ಯೂಸ್

ಉಡುಪಿ: ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಕುಟುಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರಕ್ಷಿತ್ ತಂದೆ ಮತ್ತು ತಾಯಿ ವಿವಾಹದ 50 ವಸಂತಗಳನ್ನು ಪೂರೈಸಿದ್ದಾರೆ. ಈ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟ ಕೂಡ ಪಾಲ್ಗೊಂಡಿದ್ದರು.

ಜಾಹೀರಾತು

ಇತ್ತೀಚಿಗಷ್ಟೇ ಉಡುಪಿಯ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿತ್ತು. ಇದೀಗ ಕುಟುಂಬದ ಆತ್ಮೀಯರಿಗೆ ಔತಣ ಕೂಟ ಏರ್ಪಡಿಸಿದ್ದು, ಇದರಲ್ಲಿ ರಕ್ಷಿತ್ ಭಾಗಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಕ್ಷಿತ್ ಶೆಟ್ಟಿ ತಂದೆ ಶ್ರೀಧರ ಶೆಟ್ಟಿ ಉಡುಪಿಯ ಖ್ಯಾತ ಗುತ್ತಿಗೆದಾರರು, ತಾಯಿ ರಂಜನಾ ಶೆಟ್ಟಿ ಸಾಮಾಜಿಕ ಕಾರ್ಯಕರ್ತೆ. ಕುಟುಂಬದ ನಿಕಟ ಬಂಧುಗಳು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುವ ರಕ್ಷಿತ್ ಈ ವೇಳೆ ಬಂಧುಗಳ ನಡುವೆ ಗಮನ ಸೆಳೆದರು.

ಸದ್ಯ ಕನ್ನಡ ಚಿತ್ರರಂಗ ರಕ್ಷಿತ್ ನಿರ್ದೇಶನದ ರಿಚರ್ಡ್ ಆಂತೋನಿ ಸಿನಿಮಾಗೆ ಕಾತರದಿಂದ ಕಾಯುತ್ತಿದೆ. ಸಿನಿಮಾ ತಯಾರಿಯಲ್ಲಿರುವ ರಕ್ಷಿತ್, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ.