ಸನಾತನ ನಾಟ್ಯಾಲಯದ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಸನಾತನ ಗುರುಪರಂಪರ ಕಾರ್ಯಕ್ರಮ -ಕಹಳೆ ನ್ಯೂಸ್

ಮಂಗಳೂರು: ಮನುಷ್ಯ ಎಷ್ಟೇ ದೊಡ್ಡವನಾದರೂ ಕಿರಿಯರು ನಮಸ್ಕರಿಸಿದಾಗ ಆತ ತನ್ನ ಪುಣ್ಯ ಸಂಪಾದನೆಯನ್ಕು ಆಶೀರ್ವಾದ ರೂಪದಲ್ಲಿ ಕೊಡಬೇಕು. ಅಂತಹ ಅಪರೂಪದ ಗುರುಪರಂಪರೆಯನ್ನು ಸನಾತನ ನಾಟ್ಯಾಲಯ ಮುಂದುವರೆಸಿಕೊಂಡು ಬರುತ್ತಿದೆ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಂ.ಬಿ. ಪುರಾಣಿಕ್ ಹೇಳಿದರು.
ಅವರು ಸನಾತನ ನಾಟ್ಯಾಲಯದ ವತಿಯಿಂದ ಶನಿವಾರದಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಸನಾತನ ಗುರುಪರಂಪರ ಕಾರ್ಯಕ್ರಮದಲ್ಲಿ ಗುರುನಮನ ಸ್ವೀಕರಿಸಿ ಮಾತನಾಡಿದರು.
ಇಂದು ಸನಾತನ ಧರ್ಮ ಅಳಿಸುವ ಪ್ರಯತ್ನ ನಡೆಯುತ್ತಿದೆ. ಅಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ನಮ್ಮ ಸಾಧನೆಯನ್ನು ಸಾಧಕರ ನ್ನು ಅವಮಾನಿಸುವ ಪ್ರಯತ್ನ ನಡೆಯುತ್ತಿರುವುದು ಕಂಡು ಬೇಸರ ಆಗ್ತಿದೆ. ಅಂತಹ ವಾತಾವಣರದಲ್ಲಿ ಈ ರೀತಿ ನಮ್ಮ ಮಕ್ಳಳಿಗೆ ಸಂಸ್ಕಾರದ ಕೊಡುತ್ತಿರುವುದು ಶ್ಲಾಘನೀಯ ಎಂದರು
ಶ್ರೀ ಕ್ಷೇತ್ರ ಕದ್ರಿಯ ಮಲ್ಲಿಕಾ ಕಲಾವೃಂದದ ಕಾರ್ಯಾಧ್ಯಕ್ಷರಾದ ಸುಧಾಕರ ರಾವ್ ಪೇಜಾವರ ಅವರು, ಲಲಿತ ಕಲಾಸದನದ ಸ್ಥಾಪಕ, ಹಿರಿಯ ನೃತ್ಯಗುರು, ನಾಟ್ಯಾಚಾರ್ಯ ಬಿ. ಪ್ರೇಮ್‌ನಾಥ್ ಅವರ ಸಂಸ್ಮರಣೆ ಮಾಡಿದರು. ಪ್ರೇಮ್ ನಾಥ್ ಮಾಷ್ಟರ್ ಅವರ ಪುತ್ರ ಸುದರ್ಶನ್ ಉಪಸ್ಥಿತರಿದ್ದರು.
ಬೆಂಗಳೂರಿನ ಸನಾ ನಾಟ್ಯಾಲಯದ ಸುಮನ್ ರಾಜ್ ಬಾಂದೇಕರ್ ಅವರನ್ನು ಗುರುಪ್ರೇರಣ ಗೌರವ ನೀಡಿ ಪುರಸ್ಕರಿಸಲಾಯಿತು.
ಸಂಸ್ಥೆಯ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು.ವಿದುಷಿ ಶ್ರೀಲತಾ ನಾಗರಾಜ್ ನಿರೂಪಿಸಿದರು.
ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ವಿದುಷಿ ಶಾರದಾ ಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಮಾರ್ಗದರ್ಶನದಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಹಾಡುಗಾರಿಕೆಯಲ್ಲಿ ಶರತ್‌ಕುಮಾರ್, ಮೃದಂಗದಲ್ಲಿ ರಾಕೇಶ್ ಹೊಸಬೆಟ್ಟು, ಕೊಳಲಿನಲ್ಲಿ ಮೇದಾ ಉಡುಪ ಸಹಕರಿಸಿದರು.











