
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಂದು (ಸೋಮವಾರ) ಮೊದಲ ಬಾರಿಗೆ ಸಂಸತ್ ಭವನಕ್ಕೆ ಆಗಮಿಸಿದ ಧರ್ಮೇಂದ್ರ ಪ್ರಧಾನ್ ಅವರಿಗೆ ಎನ್‌ಡಿಎ ಸಂಸದರು ಅದ್ಧೂರಿ ಸ್ವಾಗತ ಕೋರಿದರು.
ಸಂಸತ್ ಆವರಣದ ಮಕರದ್ವಾರದಲ್ಲಿ ಪೇಟ ತೊಡಿಸಿ, ಅದ್ಧೂರಿ ಸ್ವಾಗತ ಕೋರಿದ ಬಳಿಕ, ಎಲ್ಲಾ ಎನ್‌ಡಿಎ ಸಂಸದರು ಪೂರ್ಣ ಗೌರವದೊಂದಿಗೆ ಅವರನ್ನ ಸದನಕ್ಕೆ ಬರಮಾಡಿಕೊಂಡರು.
ಈ ಸ್ವಾಗತದ ಮೂಲಕ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅವರ ಆತ್ಮಸಾಕ್ಷಿಯಿಂದ ತೆಗೆದುಕೊಂಡ ಸ್ವಯಂಪ್ರೇರಿತ ನಿರ್ಧಾರ, ವಿದ್ಯಾರ್ಥಿಗಳು ಮತ್ತು ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ. ಇಡೀ ಸರ್ಕಾರ ಮತ್ತು ಸಂಘಟನೆ ಅವರ ಹಿಂದೆ ದೃಢವಾಗಿ ನಿಂತಿದೆ ಎಂಬ ಸಂದೇಶ ಸಾರಿತು.











