Recent Posts

Sunday, April 26, 2026
ಸುದ್ದಿ

ಮೊಬೈಲ್ ಚಾರ್ಜರ್ ನಿಂದ ಶಾಕ್ ಹೊಡೆದು ಇಬ್ಬರು ಸಾವು – ಕಹಳೆ ನ್ಯೂಸ್

ಚಿಕ್ಕಮಗಳೂರು: ಗೃಹ ಪ್ರವೇಶದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಮೌನ ಆವರಿಸಿದೆ. ಚಿಕ್ಕಮಗಳೂರು ಸಮೀಪದ ಹರಿಹರದಹಳ್ಳಿ ನಿವಾಸಿ ಶಿವಕುಮಾರ್ ಕಷ್ಟಪಟ್ಟು ಹೊಸ ಮನೆಯೊಂದನ್ನು ಕಟ್ಟಿಸಿದ್ದಾರೆ. ಅದೇ ಮನೆಯಲ್ಲಿ ಮೊಬೈಲ್ ಚಾರ್ಜರ್ ನಿಂದ ಶಾಕ್ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.

ಶುಕ್ರವಾರ ಗೃಹ ಪ್ರವೇಶ ನಡೆಯಬೇಕಿತ್ತು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮನೆ ಕಟ್ಟಿಸಿದ್ದ ಶಿವಕುಮಾರ್ ಅಂತಿಮ ಹಂತದ ಕೆಲಸಗಳನ್ನು ಮಾಡಲು ಸಂಬಂಧಿಗಳಾದ ಭರತ್ ಮತ್ತು ಸಚಿನ್ ಅವರೊಂದಿಗೆ ಹೊಸ ಮನೆಗೆ ತೆರಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೊಬೈಲ್ ಚಾರ್ಜಿಗೆ ಇಟ್ಟು ಕೆಲಸ ಮಾಡುವ ಸಂದರ್ಭದಲ್ಲಿ ಜನರೇಟರ್ ನಲ್ಲಿ ದಟ್ಟ ಹೊಗೆ ಆವರಿಸಿದೆ. ಈ ವೇಳೆ ಮೊಬೈಲ್ ಚಾರ್ಜರ್ ತೆಗೆಯಲು ಹೋದ ಶಿವಕುಮಾರ್ ಮತ್ತು ಭರತ್ ಅವರಿಗೆ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಚಿನ್ ಅವರು ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.