Recent Posts

Thursday, June 18, 2026
ಸುದ್ದಿ

ಅಯ್ಯಪ್ಪ ವೃತದಾರಿಗಳಿಂದ ತ್ರಿಶೂರ್ ದೇವಾಲಯದಲ್ಲಿ ಸ್ವಚ್ಛತೆ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಬಿಸಿರೋಡಿನ ಅಯ್ಯಪ್ಪ ವೃತದಾರಿಗಳಿಂದ ದೇವಾಲಯದ ಸ್ವಚ್ಛತೆ ಕಾರ್ಯಕ್ರಮ ನೆರವೇರಿತು. ತ್ರಿಶೂರ್ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯಕ್ರಮದ ಮೂಲಕ ಅಯ್ಯಪ್ಪ ವೃತದಾರಿಗಳು ಇತರರಿಗೆ ಮಾದರಿಯಾದರು.

ಜಾಹೀರಾತು
ಜಾಹೀರಾತು

ಬಂಟ್ವಾಳ ತಾಲೂಕಿನ ಸುಮಾರು 70 ಅಯ್ಯಪ್ಪ ವೃತದಾರಿಗಳು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಿಸಿರೋಡಿನ ಪೋಲೀಸ್ ಲೈನ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ಸನ್ನಿದಾನದಿಂದ ರಮಾನಂದ ಗುರುಸ್ವಾಮಿ ಅವರ ನೇತ್ರತ್ವದಲ್ಲಿ 70ಮಂದಿ ಅಯ್ಯಪ್ಪ ಮಾಲಾಧಾರಿಗಳು ಜನವರಿ ೧೦ ಶಬರಿಮಲೆ ಅಯ್ಯಪ್ಪ ಬೆಟ್ಟಕ್ಕೆ ತೆರಳಿದ್ದರು.

ಶಬರಿಮಲೆ ಯಾತ್ರೆ ಮುಗಿಸಿ ವಾಪಾಸುಗುವ ವೇಳೆ ತ್ರಿಶೂರ್ ಈಶ್ವರ ದೇವಾಲಯ ಕ್ಕೆ ಭೇಟಿ ನೀಡಿ ದೀಪಾರಾಧನೆ ಸೇವೆ ಮಾಡಿದ ಬಳಿಕ ಸುಮಾರು 2 ಗಂಟೆಯಿಂದ 5.30 ಗಂಟೆಯವರೆಗೆ ಈ ದೇವಾಲಯದ ಸುತ್ತ ಸ್ವಚ್ಚತಾ ಕಾರ್ಯ ನಡೆಸಿ ದೇವರ ಸೇವೆ ಮಾಡಿ ಇತರರಿಗೆ ಮಾದರಿಯಾದರು.