Wednesday, September 16, 2026
ದೆಹಲಿರಾಜ್ಯಸುದ್ದಿ

ಪೇಜಾವರ ಮಠದ ಚಾತುರ್ಮಾಸ್ಯ ಕಾರ್ಯಕ್ರಮ : ವೇದವ್ಯಾಸ ಗುರುಕುಲಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಭೇಟಿ – ಕಹಳೆ ನ್ಯೂಸ್

ನವದೆಹಲಿ: ಶ್ರೀ ಪೇಜಾವರ ಮಠದ ಚಾತುರ್ಮಾಸ್ಯ ಕಾರ್ಯಕ್ರಮಕ್ಕಾಗಿ ದೆಹಲಿ  ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ತರಣ್ ಜಿತ್ ಸಿಂಗ್ ಸಂಧು  ಅವರಿಂದು (ಸೆ.15) ಬೆಳಗ್ಗೆ ವೇದವ್ಯಾಸ ಗುರುಕುಲಕ್ಕೆ ಭೇಟಿ ನೀಡಿ, ಪೇಜಾವರ ಶ್ರೀಗಳನ್ನು  ಭೇಟಿಯಾದರು.
ಗುರುಕುಲದ ಪ್ರಾಚಾರ್ಯ ಡಾ.ವಿಠೋಬಾಚಾರ್ಯ, ಮಠದ ಪಿಆರ್‌ಒ ವಾಸುದೇವ ಭಟ್ ಹಾಗೂ ಶ್ರೀಗಳ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಮೊದಲಾದವರು ಲೆಫ್ಟಿನೆಂಟ್ ಗವರ್ನರ್ ಅವರನ್ನು ಬರಮಾಡಿಕೊಂಡರು.

ಜಾಹೀರಾತು

ಗುರುಕುಲದ ವಿದ್ಯಾರ್ಥಿಗಳು ಪೂರ್ಣಕುಂಭ ಸ್ವಾಗತ ಹಾಗೂ ವೇದಘೋಷದೊಂದಿಗೆ ಅವರನ್ನು ಸ್ವಾಗತಿಸಿದರು. ಬಳಿಕ ಶ್ರೀ ರಾಮ ವಿಠಲ ಕೃಷ್ಣದೇವರ ಹಾಗೂ ಶ್ರೀ ಗಣೇಶನ (ಬ್ರಿಕ್ಸ್ ಗಣೇಶ) ದರ್ಶನ ಪಡೆದ ಲೆಫ್ಟಿನೆಂಟ್ ಗವರ್ನರ್ ಅವರು ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಫಲಪುಷ್ಪ ಸಮರ್ಪಿಸಿ ಸತ್ಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಗುರುಕುಲ, ಮಧ್ವಾಚಾರ್ಯರು, ಉಡುಪಿ ಹಾಗೂ ಪೇಜಾವರ ಮಠದ ಕುರಿತು ಲೆಫ್ಟಿನೆಂಟ್ ಗವರ್ನರ್ ಅವರು ಶ್ರೀಗಳಿಂದ ಮಾಹಿತಿ ಪಡೆದುಕೊಂಡರು. ವೇದವ್ಯಾಸ ಗುರುಕುಲದ ಕಾರ್ಯಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಇಂತಹ ಸಂಸ್ಥೆಗಳ ಪೋಷಣೆ ಮತ್ತು ಸಂವರ್ಧನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಮಕ್ಕಳಿಗೆ ಸಂಸ್ಕಾರ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ತಮ್ಮಿಂದ ಸಾಧ್ಯವಿರುವ ಪೂರ್ಣ ಸಹಕಾರ ನೀಡುವುದಾಗಿ ತರಣ್ ಜಿತ್ ಸಿಂಗ್ ಸಂಧು ತಿಳಿಸಿದರು.

ವಸಂತ್ ಕುಂಜ್ ಪ್ರದೇಶದ ಸ್ಥಳೀಯ ಮಕ್ಕಳಿಗೂ ಗುರುಕುಲದಲ್ಲಿ ಸಂಸ್ಕಾರ ಶಿಕ್ಷಣ ನೀಡುವಂತಾಗಬೇಕು ಎಂದು ಅವರು ಆಶಿಸಿದರು. ಇದಕ್ಕೆ ಪೇಜಾವರ ಶ್ರೀಗಳು ಸಮ್ಮತಿ ಸೂಚಿಸಿ, ಲೆಫ್ಟಿನೆಂಟ್ ಗವರ್ನರ್ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.