ಸುದೀರ್ಘ 32ವರ್ಷಗಳ ಕಾಲ ಮುಖ್ಯೋಪಾಧ್ಯಾರಾಗಿ ಸೇವೆ ಸಲ್ಲಿಸಿದ ಎಂ.ಸದಾಶಿವ ಭಟ್ ನೇರಳಕಟ್ಟೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ – ಕಹಳೆ ನ್ಯೂಸ್

ಎಂ.ಸದಾಶಿವ ಭಟ್ ನೇರಳಕಟ್ಟೆ (75)ಅವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು
ಅವರು ಮಾಣಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ಸ್ಥಾಪಕ ಮುಖ್ಯೋಪಾಧ್ಯಾರಾಗಿ ಸೇವೆ ಪ್ರಾರಂಭಿಸಿ ಸುದೀರ್ಘ 32ವರ್ಷಗಳ ಕಾಲ ಸೇವೆ ಸಲ್ಲಿಸಿದ ಹೆಮ್ಮೆ ಇವರದ್ದು..
ಗಣಿತಶಾಸ್ತ್ರವನ್ನು ಲೀಲಾಜಾಲವಾಗಿ ಮಕ್ಕಳಿಗೆ ಬೋಧಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿರುತ್ತಾರೆ
ಇವರು ಪತ್ನಿ ರಾಜೇಶ್ವರಿ ಯಸ್ ಭಟ್, ಮಕ್ಕಳಾದ ಆಶಾ.ಯು.ಭಟ್ ಹಾಗೂ ರೂಪ ಶ್ರೀ ಮತ್ತು ಅಳಿಯಂದಿರು ಹಾಗೂ ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ.











