
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಹೈದರಾಬಾದ್‌ನ ನಾದರ್‌ಗುಲ್‌ನ ವಿದ್ಯಾಭಾರತಿ ವಿಜ್ಞಾನ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿಯ ಕ್ಷೇತ್ರಮಟ್ಟದ ಅಥ್ಲೆಟಿಕ್ಸ್ ಹಾಗೂ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ ಮೆರೆದು ಬಹುಮಾನಗಳಿಗೆ ಭಾಜನರಾಗಿದ್ದಾರೆ. ಬಾಲವರ್ಗದ ಬಾಲಕರ ಹಾಗೂ ಬಾಲಕಿಯರ ಚೆಸ್ ತಂಡ ಮತ್ತು ಕಿಶೋರ ವಿಭಾಗದ ಬಾಲವರ್ಗದ ಅಥ್ಲೆಟಿಕ್ಸ್ ತಂಡ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದೆ.
ಅಥ್ಲೆಟಿಕ್ಸ್ನಲ್ಲಿ ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ತೆಂಕಿಲದ ಕೃಷ್ಣ ನಾಯಕ್ ಮತ್ತು ರಮ್ಯ ಕೃಷ್ಣ ಅವರ ಪುತ್ರಿ 10ನೇ ತರಗತಿಯ, ಆರುಷಿ ಎನ್ ಜಾವೆಲಿನ್ ಥ್ರೋ
ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಬಾಲ ವರ್ಗದ ಬಾಲಕರ ವಿಭಾಗದಲ್ಲಿ ಸುನಿಲ್ ರಾಜ್ ಮತ್ತು ಬಿ ಬಿ ವಿದ್ಯಾ ಅವರ ಪುತ್ರ 7ನೇ ತರಗತಿಯ ಆರಾಧ್ಯ ಗಣೇಶ್ ಹೈಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಉರ್ಲಾಂಡಿಯ ಮಹೇಶ್ ಜಿ. ಮತ್ತು ಸುಕನ್ಯಾ ಕೆ. ಅವರ ಪುತ್ರ 8ನೇ ತರಗತಿಯ ದೀಪಾಂಶ್ ಶೆಟ್ಟಿ 600 ಮೀಟರ್ ಓಟದ
ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಚೆಸ್‌ನ ಬಾಲವರ್ಗದ ಬಾಲಕರ ವಿಭಾಗದಲ್ಲಿ ಉಪ್ಪಿನಂಗಡಿ, ನೆಕ್ಕಿಲಾಡಿಯ ನಿವಾಸಿ ಡಾ.ಸುಪ್ರೀತ್ ಜೋಯಲ್ ಲೋಬೋ ಮತ್ತು ಡಾ.ಶೈನಿ ಪಾಯಸ್ ದಂಪತಿಯ ಪುತ್ರ 7ನೇ ತರಗತಿಯ ಸಂಹಿತ್ ಜೊಸ್ಸಿ ಲೋಬೋ, ಕಾಣಿಯೂರಿನ ನಿವಾಸಿ ಅರವಿಂದ ಕುಮಾರ್ ಕೆ ಮತ್ತು ಜ್ಯೋತಿ ಕುಮಾರಿ ಕೆ ದಂಪತಿಯ ಪುತ್ರ 7ನೇ ತರಗತಿಯ ರತುಲ್ ಅದ್ವೈತ್, ಕುಂಜುರ್ ಪಂಜದ ನಿವಾಸಿ ಶ್ರೀನಿವಾಸ ಮಯ್ಯ ಡಿ ಮತ್ತು ಜಯಲಕ್ಷ್ಮೀ ಎಸ್ ಮಯ್ಯ ದಂಪತಿಯ ಪುತ್ರ 7ನೇ ತರಗತಿಯ ಮಯೂರ್ ಎಸ್ ಮಯ್ಯ ಹಾಗೂ ಕಲ್ಲಾರೆಯ
ನಿವಾಸಿ ಪ್ರವೀಣ್ ರೈ ಸಿ ಮತ್ತು ತೃಪ್ತಿ ರೈ ದಂಪತಿಯ ಪುತ್ರ 7ನೇ ತರಗತಿಯ ತ್ರಿನಯ್ ರೈ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಪೆರ್ನೆಯ ನಿವಾಸಿ ಗಿರೀಶ ಗೌಡ ಮತ್ತು ಸುಮಿತ್ರ ದಂಪತಿಯ ಪುತ್ರಿ 8ನೇ ತರಗತಿಯ ಸಾನ್ವಿ ಜಿ, ಸಂಪ್ಯಾದ ನಿವಾಸಿ ರವಿಕುಮಾರ ಕೆ ಮತ್ತು ಸುಮಿತ್ರ ಕೆ ದಂಪತಿಯ ಪುತ್ರಿ 8ನೇ ತರಗತಿಯ ನೈನಿಕ ಎ ಆರ್, ದರ್ಬೆಯ ನಿವಾಸಿ ಕೆ ಜಿ ಮುರಳೀಧರ ಮತ್ತು ಕೆ ಉಷಾ ಮುರಳೀಧರ ದಂಪತಿಯ ಪುತ್ರಿ 8ನೇ ತರಗತಿಯ ಕೆ ಎಂ ಶಮಿತ ಭಟ್ ಹಾಗೂ ಪಡೀಲ್ ನ ನಿವಾಸಿ ಸಂಜೀವ ರಂಜನ್ ಮತ್ತು ಅರ್ಪಣಾ ಕುಮಾರಿ ದಂಪತಿಯ ಪುತ್ರಿ 8ನೇ ತರಗತಿಯ ಶಾಂಭವಿ ರಂಜನ್ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.











