
ಪುತ್ತೂರು: 44 ನೇ ವರ್ಷದ ಫಿಲೋಮಿನ ಗಣೇಶೋತ್ಸವದ ಅಂಗವಾಗಿ ಅರಸು ಮುಂಡ್ಯಾತ್ತಾಯ ದೈವಸ್ಥಾನ ಪಾಂಗ್ಲಾಯಿ, ಕಲ್ಲಾರೆ ಹಾಗೂ ಕೆಮ್ಮಿಂಜೆ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರಗಳ ಮಕ್ಕಳ ವತಿಯಿಂದ ಶ್ಲೋಕ, ಭಜನೆ, ಆಚಾರ – ವಿಚಾರ, ಕುಣಿತ ಭಜನೆ ಕುರಿತಾದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಣೇಶೋತ್ಸವದ ಸಂಭ್ರಮವನ್ನು ಹೆಚ್ಚಿಸಲಾಯಿತು. ಮಕ್ಕಳ ಪ್ರತಿಭೆ ಹಾಗೂ ಸಾಂಸ್ಕೃತಿಕ ಆಸಕ್ತಿಗೆ ಕಾರ್ಯಕ್ರಮವು ಉತ್ತಮ ವೇದಿಕೆಯಾಯಿತು.
ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕರಾದ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು. ಅರಸು ಮುಂಡ್ಯತ್ತಾಯ ದೈವಸ್ಥಾನ ಪಾಂಗ್ಲಾಯಿ ಕೇಂದ್ರದ ನಿರ್ವಾಹಕರಾದ ಕ್ಷಮಾ ಸಂತೋಷ್ ಬೋನಂತಾಯ, ವಿನುತಾ ಎಸ್. ರಾವ್, ರಶ್ಮಿ ಉಮಾಶಂಕರ್, ಕಲ್ಲಾರೆ ಕೇಂದ್ರದ ನಿರ್ವಾಹಕರಾದ ಕವಿತಾ ಕೊಳತ್ತಾಯ, ಉಮಾ. ಡಿ. ಪ್ರಸನ್ನ, ಕೆಮ್ಮಿಂಜೆ ಕೇಂದ್ರದ ನಿರ್ವಾಹಕರಾದ ರಮಾದೇವಿ ಆಚಾರ್ ಮತ್ತು ತೇಜಸ್ವಿ ರಾಜೇಶ್ ಮಕ್ಕಳೊಂದಿಗೆ ಭಾಗವಹಿಸಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು.
ಮಕ್ಕಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಆಯೋಜಕರು ತಿಳಿಸಿದರು.











