Sunday, September 6, 2026
ಸುದ್ದಿ

ಉಚಿತ ಆಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ: ಶಿರ್ವ ಮತ್ತು ಸುತ್ತಮುತ್ತಲಿನ ಸಾರ್ವಜನಿಕರ ಉಚಿತ ಬಳಕೆಗೆ ನೂತನ ವಾಹನ ಸಮರ್ಪಣೆ

​ಶಿರ್ವ: ಶ್ರೀ ಕೆ. ಮನೋಹರ ಶೆಟ್ಟಿ ಮಂದಾರ ಅವರ ನೇತೃತ್ವದಲ್ಲಿ ಹಾಗೂ ಶಿರ್ವದ ಸಮಸ್ತ ನಾಗರಿಕರ ಅಭೂತಪೂರ್ವ ಸಹಕಾರದೊಂದಿಗೆ ನೂತನವಾಗಿ ಖರೀದಿಸಲಾದ ಉಚಿತ ಆಂಬ್ಯುಲೆನ್ಸ್ ವಾಹನದ ಲೋಕಾರ್ಪಣೆ ಕಾರ್ಯಕ್ರಮವು ಕೊಲ್ಲಬೆಟ್ಟು ಸಂಘಮಿತ್ರ ರವೀಂದ್ರ ಶೆಟ್ಟಿ ಅವರ ನಿವಾಸದಲ್ಲಿ ಯಶಸ್ವಿಯಾಗಿ ಜರುಗಿತು.
​ಶಿರ್ವ ಹಾಗೂ ಅದರ ಆಸುಪಾಸಿನ ಗ್ರಾಮಗಳ ಸಾರ್ವಜನಿಕರ ತುರ್ತು ಆರೋಗ್ಯ ಸೇವೆ ಮತ್ತು ಉಚಿತ ಉದ್ಯೋಗಕ್ಕಾಗಿ ಈ ಆಂಬ್ಯುಲೆನ್ಸ್ ವಾಹನವನ್ನು ಮುಕ್ತಗೊಳಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೂತನ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ, ಸಮಾಜದ ತುರ್ತು ಅಗತ್ಯಕ್ಕೆ ಸ್ಪಂದಿಸಿದ ಕಾರ್ಯವನ್ನು ಶ್ಲಾಘಿಸಿದರು.

ಜಾಹೀರಾತು

​ಪ್ರಮುಖರ ಉಪಸ್ಥಿತಿ:
ಈ ಶುಭ ಸಮಾರಂಭದಲ್ಲಿ ಹಿರಿಯ ಸಮಾಜ ಸೇವಕರಾದ ಟಿ. ಶಂಭು ಶೆಟ್ಟಿ, ಶ್ರೀಮತಿ ಹೇಮಲತಾ ಶಂಭು ಶೆಟ್ಟಿ ಶಿರ್ವ, ಕೆ. ಮನೋಹರ ಶೆಟ್ಟಿ ಮಂದಾರ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಹಾಗೂ ಎನ್.ಸಿ. ಶೆಟ್ಟಿ ಮುಂಬಯಿ ಮುಖ್ಯ ಸಮ್ಮುಖದಲ್ಲಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

​ಅಲ್ಲದೆ, ಶಿರ್ವ ಬಂಟರ ಸಂಘದ ಅಧ್ಯಕ್ಷರಾದ ಸಾಯಿನಾಥ ಶೆಟ್ಟಿ ಕುತ್ಯಾರು, ಶಿರ್ವ ಮಹಿಳಾ ಮಂಡಲ (ರಿ.) ಅಧ್ಯಕ್ಷರಾದ ಸ್ಪೂರ್ತಿ ಶೆಟ್ಟಿ, ಶಿರ್ವ ಸಿ. ಎ. ಬ್ಯಾಂಕ್ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ, ಗುಲಾಬಿ ಶೆಟ್ಟಿ ಕೇಂಜ ನಡಿಗುತ್ತು ಮತ್ತು ಸಮಾಜ ಸೇವಕರಾದ ರಾಮರಾಯ ಪಾಟ್ಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಈ ಉದಾತ್ತ ಸೇವಾನಿಷ್ಠೆಗೆ ಶುಭ ಹಾರೈಸಿದರು.

​ಆಪತ್ಕಾಲದಲ್ಲಿ ಸ್ಥಳೀಯ ಜನರಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲು ಈ ಉಚಿತ ಆಂಬ್ಯುಲೆನ್ಸ್ ಸೇವೆ ಅತ್ಯಂತ ಸಹಕಾರಿಯಾಗಲಿದ್ದು, ದಾನಿಗಳ ಹಾಗೂ ಸಂಘಟಕರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.