ಪುತ್ತೂರಿನಲ್ಲಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪಿಕ್ಸೆಲ್ ಕ್ರಿಯೇಟಿನ್ಸ್ ಸಂಸ್ಥೆಯ ನೂತನ ಕಚೇರಿ ನಾಳೆ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನಲ್ಲಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಜ್ವಲ್ ಎಂ.ಎಸ್.ರವರ ಮಾಲಕತ್ವದ ಪಿಕ್ಸೆಲ್ ಕ್ರಿಯೇಟಿನ್ಸ್ ಸಂಸ್ಥೆಯ ನೂತನ ಕಚೇರಿಯ ಶುಭಾರಂಭವು ಆ. 28 ರಂದು ಜರಗಲಿದೆ. ನೆಹರುನಗರ ಕಲ್ಲೇಗ ದೈವಸ್ಥಾನದ ಬಳಿಯ ಅಶ್ವಿನ್ ಕಾಂಪ್ಲೆಕ್ಸ್‌ನಲ್ಲಿ ಸಂಸ್ಥೆಯ ನೂತನ ಕಚೇರಿ ಶುಭಾರಂಭಗೊಳ್ಳಲಿದೆ. ಎಲ್‌ಇಡಿ ವಿಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವಿಡಿಯೋಗ್ರಾಫಿ, ಮಾಧ್ಯಮ ನೇರಪ್ರಸಾರಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆ ಹಾಗೂ ಲೈವ್ ವಿಡಿಯೋ ಮಿಕ್ಸಿಂಗ್ ನಲ್ಲಿ ಗುಣಮಟ್ಟದ ಸೇವೆ ನೀಡುತ್ತಾ ಬಂದಿರುವ ಸಂಸ್ಥೆಯು ಹತ್ತೂರಿನಲ್ಲಿ ಪ್ರಸಿದ್ದಿ ಪಡೆದಿದೆ. ಪ್ರಸ್ತುತ ‘ಕಂಪ್ಲೇಟ್ ಇವೆಂಟ್ ಸೊಲ್ಯೂಷನ್ – ಕ್ಯಾಪ್ಟರ್, ಕ್ರಿಯೇಟ್ ಹಾಗೂ ಸೆಲೆಬ್ರೇಟ್’ ಎಂಬ ಟ್ಯಾಗ್‌ಲೈನ್ನೊಂದಿಗೆ ಸಂಸ್ಥೆಯ ನೂತನ ಸೇವೆಗಳು ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕ ಪ್ರಜ್ವಲ್ ಎಂ.ಎಸ್.ತಿಳಿಸಿದ್ದಾರೆ.











