Friday, August 28, 2026
ಸುದ್ದಿ

ಚಿಕ್ಕಣ್ಣ ಮದುವೆ ಸಡಗರ : ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ – ಕಹಳೆ ನ್ಯೂಸ್

ಸ್ಯಾಂಡಲ್‌ವುಡ್‌ನ ಹಾಸ್ಯನಟ ಚಿಕ್ಕಣ್ಣ ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಆ.29 ರಂದು ಆರತಕ್ಷತೆ ಹಾಗೂ ಆಗಸ್ಟ್ 30 ರಂದು ಧಾರಾ ಮುಹೂರ್ತ ನಡೆಯಲಿದ್ದು, ಇಂದಿನಿದ್ದ ಮದುವೆ ಶಾಸ್ತ್ರ ಆರಂಭವಾಗಿದೆ. ಗುರುವಾರ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದ ಪಾವನಾ ಅವರ ನಿವಾಸದಲ್ಲಿ ಅರಿಶಿಣ ಶಾಸ್ತ್ರ ನೆರವೇರಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಶಾಸ್ತ್ರದಲ್ಲಿ ಪಾವನಾ ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಫ್ರೆಂಡ್ಸ್ ಕೂಡ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ. ಈ ಸಂಭ್ರಮದ ಕ್ಷಣಗಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು