Recent Posts

Friday, August 28, 2026
ಸುದ್ದಿ

ಕಡಬ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ :“ರಕ್ಷೆಯಲ್ಲಿರುವ ಸಾವಿರಾರು ಸೂಲು ಸೇರಿ ಒಂದು ಹೂವಿನ ಆಕಾರವನ್ನು ಪಡೆದು ರಕ್ಷೆ ಬಲವಾದಂತೆ ನಾವು ಕೂಡ ಯಾವುದೇ ಬೇಧವಿಲ್ಲದೆ ಎಲ್ಲರೂ ಸಮಾಜದಲ್ಲಿ ಒಗ್ಗೂಡಬೇಕು.” – ಡಾ| ಸುರೇಶ್ ಕುಮಾರ್ ಕೂಡೂರು – ಕಹಳೆ ನ್ಯೂಸ್

???????????????

ಕಡಬ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಕಡಬದಲ್ಲಿ ರಕ್ಷಾಬಂಧನ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಶ್ರೀ ಪೂರ್ಣ ಆಯುರ್ವೇದ ಚಿಕಿತ್ಸಾಲಯ ಇದರ ವೈದ್ಯರಾದ ಡಾ| ಸುರೇಶ್ ಕುಮಾರ್ ಕೂಡೂರು ಇವರು ರಕ್ಷೆಯಲ್ಲಿರುವ ಸಾವಿರಾರು ನೂಲು ಸೇರಿ ಒಂದು ಹೂವಿನ ಆಕಾರವನ್ನು ಪಡೆದು ಬಲವಾದಂತೆ ನಾವು ಕೂಡ ಜಾತಿ ಬಣ್ಣ ಯಾವುದೇ ಬೇಧವಿಲ್ಲದೇ ಭಾರತ ಮಾತೆಯನ್ನು ವಿಶ್ವಗುರು ಮಾಡುವಲ್ಲಿ ಒಂದಾಗಬೇಕು ಎಂದು ರಕ್ಷಾಬಂಧನದ ಮಹತ್ವವನ್ನು ವಿವರಿಸಿದರು.

ಜಾಹೀರಾತು

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿಸಿಕೊಂಡರು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಗುರುಗಳಾದ ಮುಖ್ಯ ಶ್ರೀಮಾನ್ ಶ್ರೀ ವಸಂತ ಕೆ. ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಧ್ವಿತಾ ಎಸ್. ರೈ 8ನೇ ತರಗತಿ ಸ್ವಾಗತಿಸಿ, ಕೃತಿ, 9ನೇ ತರಗತಿ ವಂದಿಸಿದರು. ಎನ್.ಸಿ. ಜಶ್ವಿತಾ, 10ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು