Recent Posts

Friday, August 28, 2026
ಸುದ್ದಿ

ದೇವಾಡಿಗರ ಸೇವಾ ಸಂಘ ಕಟಪಾಡಿ ವತಿಯಿಂದ 8ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಅನ್ನ ಸಂತರ್ಪಣೆ, ವಿದ್ಯಾರ್ಥಿ ವೇತನ ವಿತರಣೆ ಸನ್ಮಾನ ಕಾರ್ಯಕ್ರಮ- ಕಹಳೆ ನ್ಯೂಸ್

ದೇವಾಡಿಗರ ಸೇವಾ ಸಂಘ ಕಟಪಾಡಿ ವತಿಯಿಂದ 8ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಅನ್ನ ಸಂತರ್ಪಣೆ, ವಿದ್ಯಾರ್ಥಿ ವೇತನ ವಿತರಣೆ ಸನ್ಮಾನ ಕಾರ್ಯಕ್ರಮವು ಎಮ್.ಪ್ರಭಾಕರ್ ದೇವಾಡಿಗರ ಅಧ್ಯಕ್ಷತೆಯಲ್ಲಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿಭಾಗದಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಮಂಗಳೂರು ಯುನಿವರ್ಸಿಟಿಯಲ್ಲಿ 4ನೇ ರಾಂಕ್ ಪಡೆದ ಬಿಬಿಎ ವಿದ್ಯಾರ್ಥಿ ಛಾಯಾ ರವರನ್ನು ಸನ್ಮಾನಿಸಲಾಯಿತು.

ಜಾಹೀರಾತು

ನಿವೃತ್ತ ಕಾಪು ಪೊಲೀಸ್ ಠಾಣೆಯ ಏ ಎಸ್ ಐ ದಯಾನಂದ ದೇವಾಡಿಗ ದಂಪತಿ ಕೃಷಿಕರಾದ ರವಿ ಸೇರಿಗಾರ್ ಮಟ್ಟು ಶಿವರಾಮ್ ಪೊಸರು ವಾಸು ಸೇರಿಗಾರ್ ಕೋಟೆ ಇವರನ್ನು ಸನ್ಮಾನಿಸಲಾಯಿತು. ವಿಶ್ವ ದೇವಾಡಿಗರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ದೇವಾಡಿಗ ಅಂಬಲಪಾಡಿ ಡಿಸೆಂಬರ್ 20ರಂದು ನಡೆಯುವ ಕಾರ್ಯಕ್ರಮದ ವಿವರಣೆ ನೀಡಿದರು. ಉಡುಪಿ ದೇವಾಡಿಗರ ಸಂಘದ ಅಧ್ಯಕ್ಷರಾದ ರತ್ನಾಕರ್ ಜಿ ಎಸ್ ಹಾಗೂ ನಮ್ಮ ಸಂಘದ ಗೌರವ ಸಲಹೆಗಾರರಾದ ತುಳಸಿ ದೇವಾಡಿಗ ತಮ್ಮ ಅನಿಸಿಕೆಗಳನ್ನು ಮಂಡಿಸಿದರು ವೇದಿಕೆಯಲ್ಲಿ ಗೌರವ ಸಲಹೆಗಾರರಾದ ವಿಟ್ಟಲ ಜೆ ಸೇರಿಗಾರ್, ಉಪಾಧ್ಯಕ್ಷರಾದ ಸುಂದರ ಶೇರಿಗಾರ್ ಸುರೇಶ್ ಕೊಡವೂರು ಉಪಸ್ಥಿತರಿದ್ದರು ಮನೋಹರ್ ದೇವಾಡಿಗ ಸ್ವಾಗತಿಸಿ ನಿತಿನ್ ವಿ ಸೇರಿಗಾರ್ ವರದಿ ಮಂಡಿಸಿ ನಿಶಾ ಪ್ರಕಾಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು