Recent Posts

Wednesday, August 26, 2026
ಸುದ್ದಿ

ಪಟ್ಟೆ ಶ್ರೀಕೃಷ್ಣ ಸಮೂಹ ಸಂಸ್ಥೆಗಳಲ್ಲಿ “ಮಾಯಕದಬಿನ್ನೆದಿ”ತುಳು ಯಕ್ಷಗಾನ – ಕಹಳೆ ನ್ಯೂಸ್

ಪಟ್ಟೆ ಬಡಗನ್ನೂರು: “ತುಳು ಭಾಷೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯುವಂತಾಗಬೇಕು . ಈ ಮೂಲಕ ತುಳು ಭಾಷೆಗೆ ವಿಶ್ವ ಮಾನ್ಯತೆ ದೊರೆಯುವಂತಾಗಬೇಕು. ಗಂಡು ಕಲೆ ಎಂದು ಹೆಸರಾದ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು. ” ಎಂದು ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀಗೋಪಾಲಕೃಷ್ಣ ಭಟ್ ಹೇಳಿದರು.

ಜಾಹೀರಾತು

ಪಟ್ಟೆಯ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಭಾಭವನದಲ್ಲಿ ತುಳು ವರ್ಲ್ಡ್ ಫೌಂಡೇಶನ್ ಕಟೀಲು, ತುಳುವ ಮಹಾಸಭೆ ಪುತ್ತೂರು ವಲಯ, ತುಳುವೇಶ್ವರಿ ಆಟ ಕೂಟ ಆಶ್ರಯದಲ್ಲಿ ಸೋಣದ ದುನಿಪು ಮತ್ತು ತುಳುವ ವಾಲ್ಮೀಕಿ ಮಂದಾರ ಕೇಶವ ಭಟ್ ಬರೆದ ಮಾಯಕದ ಬಿನ್ನೆದಿ ಎಂಬ ಯಕ್ಷಗಾನವು ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು “ಯಕ್ಷಗಾನದ ಮೂಲಕ ನಮ್ಮ ಸಂಸ್ಕೃತಿಯನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು”ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾದ ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ. ರಾಜೇಶ್ ಕೃಷ್ಣ ಆಳ್ವ ಅವರು “ಸೋಣದ ದುನಿಪು”ನ ಕುರಿತು ಮಾತನಾಡಿ, “ಆಟಿ ತಿಂಗಳ ಕಷ್ಟದ ದಿನಗಳನ್ನು, ಸೋಣ ತಿಂಗಳ ಹಬ್ಬದ ದಿನಗಳನ್ನು, ಆಚಾರ ವಿಚಾರಗಳನ್ನು, ಆಹಾರ ಪದ್ಧತಿಗಳನ್ನು ತಿಳಿಯಪಡಿಸಿದರು.”
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರಿನ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾದ ಶ್ರೀ ಹೇಮನಾಥ ಶೆಟ್ಟಿ ಅವರು “ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಡು ಸಂಸ್ಥೆಯ ಹೆಸರನ್ನು ಜನಪ್ರಿಯಗೊಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರು ಶ್ರಮ ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ” ಎಂದು ಹೇಳಿದರು.

ಮಂದಾರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಮೋದ್ ಸಪ್ರೆ, ಪುತ್ತೂರು ವಲಯದ ತುಳುವ ಮಹಾಸಭೆಯ ಸಂಚಾಲಕರಾದ ಶ್ರೀ ಮನೋಹರ ರೈ ಮನವಳಿಕೆ, ಪುತ್ತೂರು ವಲಯದ ತುಳುವ ಮಹಾಸಭೆಯ ಅಧ್ಯಕ್ಷರಾದ ಶ್ರೀಮತಿ ವೇದಾವತಿ ರಾಜೇಶ, ಪುತ್ತೂರು ತುಳುವ ಮಹಾಸಭೆಯ ಕಾರ್ಯದರ್ಶಿ ಶ್ರೀ ನಿತ್ಯಾನಂದ ಶೆಟ್ಟಿ, ತುಳು ವಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಶ್ರೀ ವಸಂತ್ ರೈ, ತುಳುವೇಶ್ವರಿ ದೇವಸ್ಥಾನ ಬಸ್ರೂರು ಇಲ್ಲಿನ ಪ್ರಧಾನ ಸಂಚಾಲಕರಾದ ಶ್ರೀ ಅರವಿಂದ ಬೆಳ್ಚಡ ಉಪಸ್ಥಿತರಿದ್ದರು. ದ್ವಾರಕಾ ಪ್ರತಿಷ್ಠಾನ ಪುತ್ತೂರು ಇದರ ಕಾರ್ಯದರ್ಶಿ, ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಶ್ರೀ ಗಣರಾಜ ಕುಂಬ್ಳೆ ಅವರು ಸ್ವಾಗತಿಸಿ, ಧನ್ಯವಾದಗಳನ್ನು ಅರ್ಪಿಸಿದರು.

ಶ್ರೀ ಪ್ರಶಾಂತ್ ರೈ ಮುಂಡಾಳಗುತ್ತು, ಶ್ರೀ ಪ್ರಮೋದ್ ಕುಮಾರ್, ಶ್ರೀ ರೋಹಿತ್ ಉಚ್ಚಿಲ, ಶ್ರೀ ಅಕ್ಷಯ್ ಮಾರ್ನಡ್ , ಶ್ರೀ ಶಶಿಕಿರಣ್ ಕಾವು, ಶ್ರೀ ಚಂದ್ರಶೇಖರ್ ಧರ್ಮಸ್ಥಳ, ಸಂಸ್ಥೆ ವಿದ್ಯಾರ್ಥಿಗಳಾದ 10ನೇ ತರಗತಿಯ ಆದಿತ್ಯಕೃಷ್ಣ , 9ನೇ ತರಗತಿಯ ಸ್ವರೂಪ್,ಅಹನ ಮತ್ತು ಪಲ್ಲವಿ ಕಲಾವಿದರಾಗಿ ಭಾಗವಹಿಸಿದರು. ಪಟ್ಟೆ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಶ್ರೀವಿಘ್ನೇಶ್ ಹಿರಣ್ಯ, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಊರಿನ ಯಕ್ಷಗಾನ ಕಲಾ ಭಿಮಾನಿಗಳು, ನಿವೃತ್ತ ಶಿಕ್ಷಕರು ಭಾಗವಹಿಸಿದ್ದರು.