ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ: ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ- ಕಹಳೆ ನ್ಯೂಸ್

ವಿದ್ಯಾಭಾರತಿ ಜಿಲ್ಲಾಮಟ್ಟದ ಯೋಗ ಸ್ಪರ್ಧೆ ಕೆಪಿಎಸ್ ಸ್ಕೂಲ್ ಪಂಜಿನಡ್ಕ ಮುಲ್ಕಿ ಇಲ್ಲಿ ನಡೆಯಿತು . ಈ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.
ಪ್ರಥಮ ವಾಣಿಜ್ಯ ವಿಭಾಗದ ಮನ್ವಿತ್(Rhythmic)ಪ್ರಥಮ ಸ್ಥಾನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸೃಜನ್(Rhythmic) ಪ್ರಥಮ, ರಿತೇಶ್ ಹಾಗೂ ಯಜ್ಞ (Artistic)ದ್ವಿತೀಯ, ಸ್ಕಂದ ಬಲ್ಲಕ್ಕುರಾಯ(Traditional) ಪ್ರಥಮ, ಲೀಕ್ಷಿತ್ (Traditional)ದ್ವಿತೀಯ ಹಾಗೂ(Rhythmic) ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾAಶುಪಾಲರು ಹಾಗು ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ .











