Recent Posts

Wednesday, August 26, 2026
ಸುದ್ದಿ

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಕೃತ ವಿಭಾಗದ ವತಿಯಿಂದ ಎಲ್ಲಾ ಸಂಸ್ಕೃತ ಅಧ್ಯಾಪಕವೃಂದ ಸೇರಿ ಸಂಸ್ಕೃತ ಸಪ್ತಾಹ 2026 ರ ಪ್ರಯುಕ್ತ ವಿದ್ಯಾಕೇಂದ್ರದ ಸಂಸ್ಕೃತ ವಿದ್ಯಾರ್ಥಿಗಳಿಗಾಗಿ  ಆಯೋಜಿಸಿದ್ದ “ಸಂಸ್ಕೃತ ಛಾತ್ರ ಸಮ್ಮೇಳನ – ಕಹಳೆ ನ್ಯೂಸ್

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಕೃತ ವಿಭಾಗದ ವತಿಯಿಂದ ಎಲ್ಲಾ ಸಂಸ್ಕೃತ ಅಧ್ಯಾಪಕವೃಂದ ಸೇರಿ ಸಂಸ್ಕೃತ ಸಪ್ತಾಹ 2026 ರ ಪ್ರಯುಕ್ತ ವಿದ್ಯಾಕೇಂದ್ರದ ಸಂಸ್ಕೃತ ವಿದ್ಯಾರ್ಥಿಗಳಿಗಾಗಿ  ಆಯೋಜಿಸಿದ್ದ “ಸಂಸ್ಕೃತ ಛಾತ್ರ ಸಮ್ಮೇಳನ”ವು ದಿನಾಂಕ 25/08/2026ರಂದು ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಬೆಳಿಗ್ಗೆ ಇದರ ಉದ್ಘಾಟನಾ ಕಾರ್ಯಕ್ರಮವು ನಡೆದಿದ್ದು, ಪ್ರಗತಿಪರ ಕೃಷಿಕ, ಕಜೆ ವೃಕ್ಷಾಲಯದ ಸ್ಥಾಪಕ, ಸಂಸ್ಕೃತಾಭಿಮಾನಿಯಾದ ಶ್ರೀ ವಸಂತ ಕಜೆ ಇವರು ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿ ಶುಭಹಾರೈಸಿದರು. ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಶ್ರೀಮಾನ್ ಮಾತನಾಡುತ್ತಾ ಸಂಸ್ಕೃತವು ಎಲ್ಲಾ ಭಾಷೆಗಳ ಜನನಿ, ಹಿಂದೆ ಸಂಸ್ಕೃತವು ಎಲ್ಲರ ಮಾತೃಭಾಷೆಯಾಗಿತ್ತು, ಮುಂದೆ ಕಾಲ ಸರಿದ ಹಾಗೆ ಸಂಸ್ಕೃತದ ಬೇರೆ ಬೇರೆ ರೂಪಗಳಾದ ಇತರ ಭಾಷೆಗಳು ಹುಟ್ಟಿದವು. ಸಂಸ್ಕೃತವು ಕೇವಲ ಭಾಷೆಯಲ್ಲ, ಸಂಸ್ಕೃತವನ್ನು ರಕ್ಷಿಸಿದರೆ ಅಪಾರ ಜ್ಞಾನ ಭಂಡಾರವನ್ನು ರಕ್ಷಿಸಿದಂತೆ  ಎನ್ನುತ್ತಾ ಸಂಸ್ಕೃತ ಮಾತೆಯ ರಕ್ಷಣೆಗೆ ಕರೆ ಕೊಟ್ಟರು.
ಪರ್ಯಾವರಣಗತಿವಿಧಿಯ ಪ್ರಾಂತ ಸಂಯೋಜಕ ಶ್ರೀ ವೆಂಕಟೇಶ್, ಹಾಗೂ ತ್ಯಾಜ್ಯ ನಿರ್ವಹಣಾ ವಿಭಾಗಪ್ರಮುಖ ಶ್ರೀ ಕೇಶವ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ಜಯರಾಮ್ ಶ್ರೀಮಾನ್  ಕಾರ್ಯಕ್ರಮದ ನಿರ್ವಹಣೆ, ಪ್ರೌಢಶಾಲೆಯ ಬಾಲಕಿಯರಾದ ಕು. ಭೂಮಿಕಾ ಸ್ವಾಗತ, ಕು. ರಾಜೇಶ್ವರಿ ಧನ್ಯವಾದ ಸಮರ್ಪಿಸಿದರು.

ಜಾಹೀರಾತು

ಸಂಸ್ಕೃತ  ಛಾತ್ರ ಸಮ್ಮೇಳನದಲ್ಲಿ ವಿದ್ಯಾಕೇಂದ್ರದ ಎಲ್ಲಾ ವಿಭಾಗಗಳ ಸಂಸ್ಕೃತ ವಿದ್ಯಾರ್ಥಿಗಳು ಭಾಗವಹಿಸಿದ್ದು ರಸಪ್ರಶ್ನೆ, ಸರಳ ಸಂಸ್ಕೃತ ಸಂಭಾಷಣೆ, ಹಾಗೂ ವಿವಿಧ ಮನೋರಂಜನಾತ್ಮಕ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶ್ರೀರಾಮ ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣ ಪ್ರಸಾದ್ ಕಾಯರಕಟ್ಟೆ ಹಾಗೂ ವಿದ್ಯಾಕೇಂದ್ರದ ಎಲ್ಲಾ ಸಂಸ್ಕೃತ ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು. ಮೈತ್ರೇಯೀ ಗುರುಕುಲ ಮೂರುಕಜೆ ಇಲ್ಲಿನ ನಾಲ್ವರು ಛಾತ್ರೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.  ಪದವಿ ವಿಭಾಗದ ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಪ್ರಸನ್ನಾ ಸಮಾರೋಪ ಕಾರ್ಯಕ್ರಮವನ್ನು ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು