Recent Posts

Wednesday, August 26, 2026
ಬೆಂಗಳೂರುಸುದ್ದಿ

ಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್‌ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ: ಖಾದರ್‌ ಸ್ಫೋಟಕ ಹೇಳಿಕೆ- ಕಹಳೆ ನ್ಯೂಸ್

ಬೆಂಗಳೂರು: ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ತರಕಾರಿಗಳು ತಾಜಾ ಕಾಣಬೇಕು ಅಂತ ಕೆಮಿಕಲ್‌ ಸ್ಪ್ರೇ ಮಾಡುವ ಬಗ್ಗೆ ದೂರುಗಳು ಕೇಳಿಬಂದಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ ಖಾದರ್‌ ಸ್ಫೋಟಕ ಹೇಳಿಕೆ ನೀಡಿದರು.

ಜಾಹೀರಾತು

ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿದ ಅವರು, ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ತರಕಾರಿಗಳಿಗೆ ಕೆಮಿಕಲ್‌ ಸ್ಪ್ರೇ ವಿಚಾರದಲ್ಲಿ ದೂರು ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದರು. ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ ಮಾಲ್ ಕಂಪನಿಗಳಲ್ಲಿ ತರಕಾರಿ ಹಾಳಗಾದಂತೆ ಕಲರ್ ಕಲರ್ ಲೈಟ್ ಹಾಕಿ ತರಕಾರಿ ಹೊಳೆಯುವ ಹಾಗೆ ಇಡ್ತಾರೆ. ಜನ ಮರುಳಾಗಿ ತೆಗೆದುಕೊಳ್ತಾರೆ‌ ಎಂದರಲ್ಲದೇ ತರಕಾರಿ ತಾಜಾ ಕಾಣಬೇಕು ಅಂತ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ, ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಇತ್ತೀಚೆಗೆ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿಯ ಕುರಿತು ಮಾತನಾಡಿ, ಮುಂದಿನ ವಾರ ಅಥವಾ 15 ದಿನದಲ್ಲಿ ಹೋಟೆಲ್ ಅಸೋಸಿಯೇಷನ್, ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ಇಂದಿರಾ ಕ್ಯಾಂಟಿನ್ ಗುತ್ತಿಗೆದಾರರ ಜೊತೆ ಸಭೆ ಮಾಡಲಿದ್ದೇವೆ. ಹೋಟೆಲ್‌ಗಳ ಪರಿಶೀಲನೆ ವೇಳೆ ಅನೇಕ ಲೋಪದೋಷ ಕಂಡುಬಂದಿದೆ. ಕ್ಲಬ್‌ನವರು ಹೋಟೆಲ್ ನವರು ಯಾವ ರೀತಿ ಆಹಾರ ತಯಾರಿಕೆ ಸುರಕ್ಷತೆ ಹಾಗೂ ಟ್ರೈನಿಂಗ್ ನೀಡುವ ಬಗ್ಗೆ ಯೋಜನೆ ರೂಪಿಸಿದ್ದೇವೆ. ಇಂದಿರಾ ಕ್ಯಾಂಟೀನ್‌ ವಿಚಾರದಲ್ಲಿ ಕೂಡ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಬಂದಿಲ್ಲ
ಔಷಧ ಮಾಫಿಯಾ ಬಗ್ಗೆ ಸಿಐಡಿ ತನಿಖೆ ಕುರಿತು ಮಾತನಾಡಿ, ಕಿಂಗ್‌ಪಿನ್ ಸಿಕ್ಕಿಹಾಕಿಕೊಂಡಿದ್ದಾನೆ. ಖಾಸಗಿ ಪ್ರಮುಖ ಆಸ್ಪತ್ರೆಗಳಿಗೆ ಸರಬರಾಜು ಆಗಿರೋದು ಗೊತ್ತಾಗಿದೆ. ತನಿಖೆ ಪ್ರಗತಿಯಲ್ಲಿದೆ, ಎಲ್ಲಾ ಸತ್ಯಗಳು ಹೊರಗೆ ಬರುತ್ತವೆ. ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಬಂದಿಲ್ಲ, ಎಸ್‌ಐಟಿ ಯವರು ಶೀಘ್ರದಲ್ಲಿಯೇ ಎಲ್ಲಾ ಸತ್ಯವನ್ನ ಹೊರಗೆ ಹಾಕ್ತಾರೆ ಎಂದು ಮಾಹಿತಿ ನೀಡಿದರು.

ಕೇಂದ್ರದ ಜವಾಬ್ದಾರಿಯೂ ಇದೆ
ಇನ್ನೂ ದತ್ತೂರ ಬೀಜ ಮಾರಾಟ ಮಾಡುತ್ಯಿದ್ದ 3 ಇ-ಕಾಮರ್ಸ್‌ ಜಾಲತಾಣಗಳ ಆಹಾರ ಪರವಾನಗಿ ಅಮಾನತು ಮಾಡಿದ ಬಗ್ಗೆ ಉತ್ತರಿಸಿ, ದತ್ತೂರ ಅನ್ನುವ ವಿಷವನ್ನು ಮಾರಾಟ ಮಾಡಲಾಗುತ್ತಿದೆ. ಕೆಲವು ಕಡೆ ಕೇಂದ್ರ FSSAI ನಿಂದ ಲೈಸೆನ್ಸ್ ಪಡೆದಿದ್ದೇವೆ ಅಂತಾರೆ. ಕೇಂದ್ರದ ಅಧಿಕಾರಿಗಳಿಗೆ ಹೇಳಿದ್ರೇ ಸ್ಪಂದನೆಯೇ ಕೊಡ್ತಿಲ್ಲ. ಹೀಗಾಗಿ ಕೇಂದ್ರ ಸಿಇಓಗೆ ಹೇಳಿದ್ದೇವೆ. ಕೇಂದ್ರ ಆಹಾರ ಇಲಾಖೆ ಕೂಡ ಜವಾಬ್ದಾರಿ ಇದೆ. ಇಂತಹ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೋರುತ್ತಾರೆ. ಷೋಕಾಸು ನೋಟಿಸ್ ಕೊಡೋದಾಗಿ ಹೇಳಿದ್ದಾರೆ ಎಂದು ವಿವರಿಸಿದ್ರು.

ಇ ಕಾಮರ್ಸ್ ಪ್ಲಾಟ್ ಫಾರಂ ಗೆ ಕೇಂದ್ರ ಅನುಮತಿ ಕೊಡೋದು. ಹೀಗಾಗಿ ಕೇಂದ್ರದ ಸಹಕಾರ ಬೇಕು. 2100 ದತ್ತೂರ ಸೀಜ್ ಆಗಿದೆ. 24 ಗಂಟೆಯಲ್ಲಿ ಯಾವುದೇ ಸ್ಥಳೀಯ ಕೇಂದ್ರ ಅಧಿಕಾರಿ ಸ್ಪಂದನೆ ಕೊಡದೇ ಇದ್ದಾಗ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆಹಾರ ಪರವಾನಿಗೆ ರದ್ದಿಗೆ ಈಗ ಕೇಂದ್ರ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.