Recent Posts

Wednesday, August 26, 2026
ಸುದ್ದಿ

ಮಲ್ಪೆಯಲ್ಲಿ ಚೂರಿ ಇರಿದು ಮೀನುಗಾರನ ಬರ್ಬರ ಹತ್ಯೆ- ಕಹಳೆ ನ್ಯೂಸ್

ಉಡುಪಿ: ಮೀನುಗಾರ ಕಾರ್ಮಿಕನಿಗೆ ಚೂರಿ ಇರಿದು ಹತ್ಯೆ ಮಾಡಿದ ಘಟನೆ ಮಲ್ಪೆಯಲ್ಲಿ  ಇಂದು (ಆ.25) ಬೆಳಗ್ಗೆ ನಡೆದಿದೆ.

ಜಾಹೀರಾತು

ಚಿಕ್ಕಮಗಳೂರು  ಮೂಲದ ಅಭಿಷೇಕ್ (24) ಕೊಲೆಯಾದ ದುರ್ದೈವಿ. ರಾಯಚೂರು ಮೂಲದ ಗೋಂವಿಂದ ರಾಜು ಕೊಲೆ ಆರೋಪಿಯಾಗಿದ್ದಾನೆ. ಮುಂಜಾನೆ ಮಲ್ಪೆ ಬಂದರಿನಲ್ಲಿ ಯುವಕನಿಗೆ ಆರೋಪಿ ಚಾಕು ಇರಿದು ಪರಾರಿಯಾಗಿದ್ದ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಚಾರಣೆ ವೇಳೆ, ಕುಡಿದ ಮತ್ತಿನಲ್ಲಿ ಆರೋಪಿ ಚೂರಿ ಇರಿದಿರುವುದು ಗೊತ್ತಾಗಿದೆ. ಅಭಿಷೇಕ್‌ ಶ್ರೀ ಮಹಾಕಾಳಿ ಬೋಟ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.