Recent Posts

Thursday, August 13, 2026
ಸುದ್ದಿ

ಕೊರ್ದಬ್ಬು ದೈವಸ್ಥಾನದ ಕಾಣಿಕೆ ಹುಂಡಿ ಕಳವು :  ಆರೋಪಿ ಬಂಧನ- ಕಹಳೆ ನ್ಯೂಸ್

ಮಂಗಳೂರು : ಸುರತ್ಕಲ್ ಸಮೀಪದ ಮಧ್ಯ ಕೊಡಿಪಾಡಿಯಲ್ಲಿರುವ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದಿದ್ದ ಕಾಣಿಕೆ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು  (ಆ.10) ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು

ಉಡುಪಿ ತಾಲೂಕಿನ ಕುಕ್ಕಿಹಳ್ಳಿ ಗ್ರಾಮದ ಬೆಳ್ಳಪ್ಪಳ್ಳಿ ಕುಕ್ಕಿಕಟ್ಟೆ ಮಂಗಳಾ ಮಿಲ್ ನಿವಾಸಿ ರಾಮಚಂದ್ರ ನಾಯ್ಕ್ ಎಂಬವರ ಪುತ್ರ ಸುಖೇಶ್ ನಾಯ್ಕ್ (40) ಬಂಧಿತ ಆರೋಪಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆಗಸ್ಟ್ 5 ರಂದು ಬೆಳಗಿನ ಜಾವ ಸುಮಾರು 1.30 ರ ವೇಳೆಗೆ ದೈವಸ್ಥಾನಕ್ಕೆ ನುಗ್ಗಿದ್ದ ಕಳ್ಳನು, ಕಬ್ಬಿಣದ ಆಯುಧದಿಂದ ಬಾಗಿಲು ಮತ್ತು ಕಿಟಕಿಯನ್ನು ಮುರಿದು ಒಳಪ್ರವೇಶಿಸಿದ್ದ. ಬಳಿಕ ಅಲ್ಲಿಟ್ಟಿದ್ದ ಕಾಣಿಕೆ ಹುಂಡಿಯನ್ನು ಕಳವು ಮಾಡಿ, ಅದರಲ್ಲಿದ್ದ ಸುಮಾರು 15,000/- ರೂಪಾಯಿ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಯ ಪತ್ತೆಗಾಗಿ ಪೊಲೀಸ್ ಸಿಬ್ಬಂದಿಗಳ ತಂಡವನ್ನು ನೇಮಿಸಲಾಗಿದ್ದು, ಸತತ ತನಿಖೆ ನಡೆಸಲಾಗಿತ್ತು. ಸೋಮವಾರ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಸುಖೇಶ್ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ನಡೆಸಿದ ಸುದೀರ್ಘ ವಿಚಾರಣೆಯಲ್ಲಿ ಆತ ದೈವಸ್ಥಾನದಲ್ಲಿ ಕಳವು ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯನ್ನು ಮಂಗಳವಾರ (ಆ.11) ಮಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಯ ಅಪರಾಧ ಹಿನ್ನೆಲೆ ಬೆಳಕಿಗೆ ಬಂದಿದ್ದು, ಈತನ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಕಳವು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಈಗಾಗಲೇ ಒಂದು ಪ್ರಕರಣದಲ್ಲಿ ಈತನಿಗೆ ಶಿಕ್ಷೆಯಾಗಿದ್ದು, ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಿಂದ ಈತನ ವಿರುದ್ಧ ನ್ಯಾಯಾಲಯದ ದಸ್ತಗಿರಿ (ಬಂಧನ) ವಾರಂಟ್‌ಗಳು ಸಹ ಬಾಕಿ ಇರುವುದು ಪತ್ತೆಯಾಗಿದೆ.