ದರ್ಶನ್‌ಗೆ ತಾತ್ಕಾಲಿಕ ರಿಲೀಫ್ : ಒಂದು ವಾರ ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸದಂತೆ ಕೋರ್ಟ್ ಸೂಚನೆ- ಕಹಳೆ ನ್ಯೂಸ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದ 14ನೇ ಆರೋಪಿ ಪ್ರದೋಷ್ ಹೇಳಿಕೆಯನ್ನು ಒಂದು ವಾರಗಳ ಕಾಲ ದಾಖಲಿಸದಂತೆ ಸೆಷನ್ಸ್ ಕೋರ್ಟ್ ಆದೇಶಿಸಿದೆ.
ಪ್ರದೋಷ್ ಹೇಳಿಕೆ ದಾಖಲು ಮಾಡದಂತೆ ಕೋರ್ಟ್‌ನಲ್ಲಿ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿತು. ಈ ವೇಳೆ, ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಇದೆ. ಒಂದು ವೇಳೆ ಹೈಕೋರ್ಟ್ ಸೆಷನ್ಸ್ ಕೋರ್ಟ್ ಅದೇಶ ಎತ್ತಿಹಿಡಿದರೆ ಪ್ರಕ್ರಿಯೆ ಮುಂದುವರೆಸಬಹುದು. ತಕ್ಷಣಕ್ಕೆ ಪ್ರದೂಷ್ ಹೇಳಿಕೆ ದಾಖಲಿಸಬಾರದು ಎಂದು ಪ್ರಬಲವಾಗಿ ವಾದಿಸಿದರು. ಇದಕ್ಕೆ ಪ್ರದೋಷ್ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಕೋರ್ಟ್ ದರ್ಶನ್ ಪರ ವಕೀಲರ ವಾದವನ್ನು ಪುರಸ್ಕರಿಸಿ, ಆಗಸ್ಟ್ 18ರವರೆಗೆ ಪ್ರದೋಶ್ ಹೇಳಿಕೆ ದಾಖಲು ಮಾಡದಂತೆ ಸೂಚಿಸಿದೆ. ಹೀಗಾಗಿ ದರ್ಶನ್‌ಗೆ ಒಂದು ವಾರಗಳ ಕಾಲ ರಿಲೀಫ್ ಸಿಕ್ಕಂತಾಗಿದೆ.
ಜೈಲಿನಲ್ಲಿ ಪ್ರದೂಷ್ ಭದ್ರತೆ ನೀಡಿ
ಇಂದು ವಿಚಾರಣೆಯ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ದರ್ಶನ್, ಪವಿತ್ರಾಗೌಡ ಹಾಗೂ ಪ್ರದೂಷ್ ಹಾಜರಾಗಿದ್ದರು.











