Recent Posts

Thursday, August 13, 2026
ಜಿಲ್ಲೆಬೆಳಗಾವಿಸುದ್ದಿ

ಶಿವಂ ಅಸೋಸಿಯೇಟ್ಸ್, ಅಂಗ ಸಂಸ್ಥೆಗಳಿಂದ ಸುಮಾರು 2110 ಕೋಟಿ ವಂಚನೆ: ಇಡಿಶಿವಂ ಅಸೋಸಿಯೇಟ್ಸ್, ಅಂಗ ಸಂಸ್ಥೆಗಳಿಂದ ಸುಮಾರು 2110 ಕೋಟಿ ವಂಚನೆ: ಇಡಿ – ಕಹಳೆ ನ್ಯೂಸ್

ಬೆಳಗಾವಿ: ಶಿವಂ ಅಸೋಸಿಯೇಟ್ಸ್  ವಿರುದ್ಧದ ವಂಚನೆ ಪ್ರಕರಣಕ್ಕೆ ಇದೀಗ ಜಾರಿ (ED Raid) ನಿರ್ದೇಶನಾಲಯ (ED) ಎಂಟ್ರಿಯಾಗಿದೆ. ದಾಳಿ ಬಳಿಕ ಇಡಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಕಂಪನಿ ಮೂಲಕ ನಡೆದಿದೆ ಎನ್ನಲಾದ ಹಣಕಾಸು ವಂಚನೆಯ ಹಲವು ವಿವರಗಳು ಬಹಿರಂಗವಾಗಿವೆ.
ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವಿರುದ್ಧ ಜಿಲ್ಲಾಡಳಿತ ಸಾರಿದ್ದ ಸಮರದ ಬಳಿಕ ಇದೀಗ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ED) ಕೈಗೆತ್ತಿಕೊಂಡಿತ್ತು. ದಾಳಿ ನಡೆಸಿದ ಬಳಿಕ ಇಡಿ ತನ್ನ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಶಿವಾನಂದ ನೀಲಣ್ಣವರ್ ಒಡೆತನದ ‘ಶಿವಂ ಅಸೋಸಿಯೇಟ್ಸ್’ ಕಂಪನಿಯ ಮೂಲಕ ನಡೆದಿದೆ ಎನ್ನಲಾದ ವಂಚನೆಯ ವಿವರಗಳನ್ನು ಬಿಚ್ಚಿಟ್ಟಿದೆ.

ಜಾಹೀರಾತು