Recent Posts

Thursday, August 13, 2026
ಸುದ್ದಿ

ಪಾಂಗಳ ಆರ್ಯಾಡಿ ಶ್ರೀ ಜನಾರ್ಧನ ದೇವರ ಸನ್ನಿಧಿಯಲ್ಲಿ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ- ಕಹಳೆ ನ್ಯೂಸ್

30 ವರ್ಷಗಳ ಹಿಂದೆ ಸೌಹಾರ್ದತೆ ಭಕ್ತಿಯ ಸಾಮರಸ್ಯ ಮತ್ತು ಸಹಬಾಳ್ವೆಯಿಂದ ಗ್ರಾಮ ಹಾಗೂ ರಾಷ್ಟ್ರದ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಅಂದಿನ ಹಿರಿಯರಾದ ಶ್ರೀ ರಾಜಗೋಪಾಲ್ ರಾವ್ ಶ್ರೀನಿವಾಸ್ ಭಟ್ ಶ್ರೀರಂಗರಾವ್ ,ಹರೀಶ್ ಶೆಟ್ಟಿ ಪಾಂಗಳ,ರಿಕ್ಷಾ ಚಾಲಕರು ಮತ್ತು ಮಾಲಕರು ಊರಿನ ಅನೇಕ ಹಿರಿಯರು ಎಲ್ಲರ ಏಳಿಗೆಯ ಚಿಂತನೆಯಿಂದ ಗಣೇಶೋತ್ಸವ ಸಮಿತಿಯನ್ನು ಪ್ರಾರಂಭ ಮಾಡಿದರು ಪ್ರಾರಂಭದಿಂದ ಇಂದಿನವರೆಗೆ ಗಣೇಶನ ಕೃಪೆಯಿಂದ ಮತ್ತು ಭಕ್ತರ ಸಹಕಾರದಿಂದ ಸಂಭ್ರಮದಿಂದ ಗಣೇಶೋತ್ಸವ ಕಾರ್ಯಕ್ರಮವು ನಡೆಯುತ್ತಾ ಬಂದಿರುವುದು ಪ್ರಾರಂಭದಿಂದಲೂ ವಿದ್ಯಾರ್ಥಿಗಳಿಗೆ ,ಸಾಧನೆ ಮಾಡಿದ ಸಾಧಕರಿಗೆ ಗುರುತಿಸುವ ಮತ್ತು ಗೌರವಿಸುವ ಮತ್ತು ಸಾಮಾಜಿಕ ವಾಗಿ ಆರೋಗ್ಯ ಶಿಬಿರ ರಕ್ತದಾನ ಶಿಬಿರ ಕೆಸರುಗದ್ದೆ ಓಟ ರಂಗವಲ್ಲಿ ಸ್ಪರ್ಧೆ ಭಜನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಾಮಾಜಿಕವಾಗಿಯೂ ಉತ್ತಮ ರೀತಿಯಲ್ಲಿ ಸಮಿತಿ ಯು ಕೆಲಸ ಮಾಡುತ್ತಿದ್ದು ಈ ಬಾರಿಯೂ ಗಣೇಶೋತ್ಸವ ಸಂಭ್ರಮ ವು ಮೂರು ದಿನಗಳವರೆಗೆ ನಡೆಸಲು ಸಮಿತಿ ತೀರ್ಮಾನಿಸಿದ್ದು ರಕ್ತದಾನ ಶಿಬಿರ ಹೆಸರುಗದ್ದೆ ಓ ಟ ಇನ್ನಿತರ ಸಂಸ್ಕೃತಿ ಕ ಕಾರ್ಯಕ್ರಮಗಳು ಭಜನಾ ಕಾರ್ಯಕ್ರಮಗಳು ರಂಗವಲ್ಲಿ ಮತ್ತು ಆಟೋಟ ಸ್ಪರ್ಧೆ ಈ ಎಲ್ಲಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ನಡೆಸುವಲ್ಲಿ ನಮಗೆ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕೆಂದು ಈ ಬಾರಿಯ ಸಮಿತಿಯ ಅಧ್ಯಕ್ಷರಾದ ವಕೀಲ ಶಿವಾನಂದ ಅಮೀನವರು ಗಣೇಶ ಉತ್ಸವ ಸಮಿತಿಯ ಪರವಾಗಿ ಸರ್ವ ಭಕ್ತ ಮಂಡಳಿಯನ್ನು ವಿನಂತಿಸಿದ್ದಾರೆ. ಕಾರ್ಯಕ್ರಮ ದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು, ಪಾಂಗಳ ದ ಉದ್ಯಮಿ ಗಳಾದ ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು