Monday, July 20, 2026
ಸುದ್ದಿ

ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್​ಪಿಜಿ ಸಿಲಿಂಡರ್ : ಎಚ್​ಪಿ ನಂತರ ಈಗ ಭಾರತ್ ಗ್ಯಾಸ್​ನಿಂದಲೂ ಸಪ್ಲೈ ಶುರು -ಕಹಳೆ ನ್ಯೂಸ್

ಮುಂಬೈ : ಸ್ವಿಗ್ಗಿ ಇನ್​ಸ್ಟಾಮಾರ್ಟ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ನಿಗಮ ಸಂಸ್ಥೆ ಸಹಯೋಗದಲ್ಲಿ ಮನೆಬಾಗಿಲಿಗೆ ಕಿರು ಎಲ್​ಪಿಜಿ ಸಿಲಿಂಡರ್ ಒದಗಿಸುವ ಸೇವೆ ಆರಂಭಿಸಿದ ಬೆನ್ನಲ್ಲೇ ಇದೀಗ ಭಾರತ್ ಪೆಟ್ರೋಲಿಯಂ ನಿಗಮ ಸಂಸ್ಥೆಯೂ ರೇಸ್​ಗೆ ಸೇರಿದೆ. ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್, ಅತ್ಯಾಧುನಿಕ ಹಾಗೂ ಹಗುರವಾದ ಎಲ್‌ಪಿಜಿ ಸಿಲಿಂಡರ್ ಸಿಸ್ಟಂ ಆದ’ಭಾರತ್‌ಗ್ಯಾಸ್ ಲೈಟ್ ಜಿಪ್’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಸೇವೆಯಡಿ ಗ್ರಾಹಕರು ತಕ್ಷಣವೇ ಹೊಸ ಗ್ಯಾಸ್ ಕನೆಕ್ಷನ್ ಪಡೆಯಬಹುದು ಹಾಗೂ ಅತಿ ವೇಗದ  ಡೆಲಿವರಿ ಸೌಲಭ್ಯವನ್ನು ಹೊಂದಲಿದ್ದಾರೆ.

ಭಾರತ್ ಗ್ಯಾಸ್ ಲೈಟ್ ಝಿಪ್ ಗ್ಯಾಸ್ ಸಿಲಿಂಡರ್ ವಿಶೇಷತೆಗಳು

ಭಾರತ್​ಗ್ಯಾಸ್ ಲೈಟ್ ಝಿಪ್ ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳಿಗಿಂತ ಭಿನ್ನವಾಗಿದೆ. ಇವುಗಳು ಹಗುರವಾಗಿದ್ದು, ಸುಲಭವಾಗಿ ಎತ್ತಿಕೊಂಡು ಹೋಗಬಹುದು. ಇದು ತುಕ್ಕು ಹಿಡಿಯದ ಬಾಡಿಯನ್ನು ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಬಾಕಿ ಇದೆ ಎಂಬುದನ್ನು ಹೊರಗಿನಿಂದಲೇ ನೋಡಬಹುದಾದ ಇಂಡಿಕೇಟರ್  ಇಲ್ಲಿದೆ. ಇದು ಆಧುನಿಕ ವಿನ್ಯಾಸ ಹಾಗೂ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಸ್ತುತ ಈ ಸೇವೆಯನ್ನು ಮುಂಬೈನಲ್ಲಿ ಮೊದಲ ಬಾರಿಗೆ ಲಾಂಚ್ ಮಾಡಲಾಗಿದೆ. ಮುಂಬರುವ ಆಗಸ್ಟ್ 15 ರ ವೇಳೆಗೆ ದೇಶದ 24 ರಾಜ್ಯಗಳ 100 ಕ್ಕೂ ಹೆಚ್ಚು ನಗರಗಳಿಗೆ ಈ ಸೇವೆಯನ್ನು ವಿಸ್ತರಿಸಲು BPCL ಯೋಜಿಸಿದೆ.

ಹೆಚ್​ಪಿಸಿಎಲ್​ನಿಂದ ಮೊದಲ್ಗೊಂಡಿತ್ತು ಈ ಸೇವೆ

ಇತ್ತೀಚೆಗಷ್ಟೇ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್  ಸಂಸ್ಥೆಯು ‘ಸ್ವಿಗ್ಗಿ ಇನ್‌ಸ್ಟಾಮಾರ್ಟ್’  ಜೊತೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನಲ್ಲಿ 10 ಕೆಜಿಯ ಹಗುರವಾದ ‘ಎಚ್‌ಪಿ ನವ್ಯಾ’  ಸಿಲಿಂಡರ್‌ಗಳ ಆನ್-ಡಿಮ್ಯಾಂಡ್ ಡೆಲಿವರಿ ಆರಂಭಿಸಿತ್ತು. ಇದಕ್ಕೆ ಪೈಪೋಟಿ ನೀಡಲು ಈಗ BPCL ಕೂಡ ತನ್ನ ಪ್ರೀಮಿಯಂ ಹಗುರ ಸಿಲಿಂಡರ್ ಸೇವೆಯನ್ನು ವೇಗವಾಗಿ ವಿಸ್ತರಿಸುತ್ತಿದೆ.

ಇಂದಿನ ವೇಗದ ಜೀವನಶೈಲಿಗೆ, ಅದರಲ್ಲೂ ವಿಶೇಷವಾಗಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಣ್ಣ ಕುಟುಂಬಗಳಿಗೆ ಸೂಕ್ತವಾಗುವಂತೆ ಈ ಸುಲಭ ಹಾಗೂ ಸುರಕ್ಷಿತ ಸಿಲಿಂಡರ್‌ಗಳನ್ನು ತೈಲ ಕಂಪನಿಗಳು ಮಾರುಕಟ್ಟೆಗೆ ತರುತ್ತಿವೆ.