
ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮಅವರ ಅಂತಿಮ ದರ್ಶನಕ್ಕೆ ಗಣ್ಯರು ಹಾಗೂ ಸಿನಿ ತಾರೆಯರ ದಂಡು ಹರಿದುಬರುತ್ತಿದೆ.
ನಗರದ ಕಾರ್ಮೆಲ್ ಶಾಲಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿರಿಯ ನಟ ದೊಡ್ಡಣ್ಣ , ನಟರಾದ ದುನಿಯಾ ವಿಜಯ್ , ಡಾಲಿ ಧನಂಜಯ್ , ನಟಿ ಪೂಜಾ ಗಾಂಧಿ ಆಗಮಿಸಿ ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದರು.
ನಟಿ ಪೂಜಾಗಾಂಧಿ ಮಾತನಾಡಿ, ಚನ್ನಮ್ಮ ಅವರ ನಿಧನದಿಂದ ಮನಸ್ಸಿಗೆ ತುಂಬಾ ನೋವಾಗ್ತಿದೆ. ದೇವೇಗೌಡರ ಮನೆಗೆ ಬಂದಾಗ ಪ್ರೀತಿಯಿಂದ ಮಾತಾಡಿಸ್ತಾ ಇದ್ದರು. ಊಟ ಮಾಡಲು ಹೇಳ್ತಿದ್ದರು. ಅವರಲ್ಲಿ ಮಾತೃಭಾವ ಇತ್ತು. ದೇವೇಗೌಡರ ಕುಟುಂಬಕ್ಕೆ ಅವರ ಅಗಲಿಕೆ ನೋವು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.











